ಮೋದಿ ಹೊಗಳಿದ್ದ ಮಹಿಳೆಯ ಬೆತ್ತಲೆ ಮೆರವಣಿಗೆ: ಸತ್ಯ ಏನು? ಮಿಥ್ಯ ಏನು?

By Web DeskFirst Published Sep 7, 2018, 6:13 PM IST
Highlights

ರಾಜಕೀಯ ವಾತಾವರಣ ಕೆಡಸಲು ಸುಳ್ಳು ಸುದ್ದಿ! ಮಹಿಳೆ ಬೆತ್ತಲೆಗೊಳಿಸಿ ಥಳಿಸಿದ್ರಾ ಕಾಂಗ್ರೆಸ್ ಕಾರ್ಯಕರ್ತರು?! ಹಳೆಯ ಫೋಟೋ ಬಳಸಿ ಸುಳ್ಳು ಸುದ್ದಿ ಪ್ರಸಾರ

ಕೋಲ್ಕತ್ತಾ(ಸೆ.7): ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ ಕಾರಣಕ್ಕೆ ಮಹಿಳೆಯೊಬ್ಬಳನ್ನು ಕಾಂಗ್ರೆಸ್ ಕಾರ್ಯಕರ್ತರು ಬೆತ್ತಲೆ ಮೆರವಣಿಗೆ ಮಾಡಿ ಥಳಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರಧಾನಿ ಮೋದಿ ಅವರನ್ನು ಹೊಗಳಿದ ಮಹಿಳೆಯನ್ನು ಕೋಲ್ಕತ್ತಾದ ಬೀದಿಯಲ್ಲಿ ಬೆತ್ತಲೆಗೊಳಿಸಿ ಕಾಂಗ್ರೆಸ್ ಕಾರ್ಯಕರ್ತರು ಥಳಿಸಿದ್ದಾರೆ ಎನ್ನಲಾಗಿತ್ತು.

ಹಿಂದೂ ಅಖಿಲೇಶ್ ಗುಪ್ತಾ ಎಂಬ ವ್ಯಕ್ತಿ ಮಹಿಳೆಯನ್ನು ಬೆತ್ತಲೆಗೊಳಿಸಿ ಥಳಿಸುತ್ತಿರುವ ಫೋಟೋವನ್ನು ತಮ್ಮ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದರು. ಆದರೆ ಇದೊಂದು ಸುಳ್ಳು ಸುದ್ದಿಯಾಗಿದ್ದು, ಅಸಲಿಗೆ ಈ ಫೋಟೋ ಪುರುಷರ ಗುಂಪೊಂದು ಆದಿವಾಸಿ ಮಹಿಳೆಯನ್ನು ಥಳಿಸುತ್ತಿದ್ದ ಫೋಟೋ ಎಂದು ಗೊತ್ತಾಗಿದೆ.

ಆದರೆ ರಾಜಕೀಯ ಅಶಾಂತಿಯ ವಾತಾವರಣ ಸೃಷ್ಟಿಸಲು ಈ ರೀತಿ ಫೋಟೋ ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

click me!