ಉತ್ಕಾಲ್ ದುರಂತ: ಕೂಲಂಕುಷ ವರದಿ ನೀಡಲು ರೈಲ್ವೇ ಮಂಡಳಿಗೆ ಸುರೇಶ್ ಪ್ರಭು ಸೂಚನೆ

By Suvarna Web DeskFirst Published Aug 20, 2017, 4:00 PM IST
Highlights

ನಿನ್ನೆ ನಡೆದ ಉತ್ಕಾಲ್ ರೈಲು ದುರಂತದ ಬಗ್ಗೆ ಕೂಲಂಕುಷವಾಗಿ ವಿವರ ನೀಡುವಂತೆ ರೈಲ್ವೇ ಸಚಿವ ಸುರೇಶ್ ಪ್ರಭು ರೈಲ್ವೇ ಮಂಡಳಿಗೆ ಸೂಚಿಸಿದ್ದಾರೆ.

ನವದೆಹಲಿ (ಆ.20): ನಿನ್ನೆ ನಡೆದ ಉತ್ಕಾಲ್ ರೈಲು ದುರಂತದ ಬಗ್ಗೆ ಕೂಲಂಕುಷವಾಗಿ ವಿವರ ನೀಡುವಂತೆ ರೈಲ್ವೇ ಸಚಿವ ಸುರೇಶ್ ಪ್ರಭು ರೈಲ್ವೇ ಮಂಡಳಿಗೆ ಸೂಚಿಸಿದ್ದಾರೆ.

ಅಪಘಾತಕ್ಕೆ ಕಾರಣಗಳೇನು? ಎಲ್ಲಿ ವೈಫಲ್ಯವಾಗಿದೆ ಎನ್ನುವುದರ ಸಂಪೂರ್ಣ ವರದಿ ನೀಡಲು ಸೂಚಿಸಿದ್ದಾರೆ.

ಅಪಘಾತದ ನಂತರ ಸ್ಥಳವನ್ನು ಅತ್ಯಂತ ಸಮೀಪದಿಂದ ಅವಲೋಕಿಸಿದ್ದೇನೆ. ಹಳಿಗಳ ರಿಪೇರಿ ಕೆಲಸ ತ್ವರಿತವಾಗಿ ನಡೆಯುತ್ತಿದೆ. ಗಾಯಗೊಂಡವರಿಗೆ ಉತ್ತಮ ವೈದ್ಯಕೀಯ ಸೇವೆ ನೀಡಲಾಗುವುದು ಎಂದು ಸುರೇಶ್ ಪ್ರಭು ಭರವಸೆ ನೀಡಿದ್ದಾರೆ.

ರೈಲು ದುರಂತಕ್ಕೆ ನಿರ್ಲಕ್ಷವೇ ಕಾರಣ ಎನ್ನಲಾಗುತ್ತಿದೆ. ಇಬ್ಬರು ರೈಲ್ವೇ ಸಿಬ್ಬಂದಿಗಳಿಬ್ಬರ ಟೆಲಿಫೋನ್ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರ ಸತ್ಯಾಸತ್ಯತೆ ಇನ್ನೂ ಅಧಿಕೃತಗೊಂಡಿಲ್ಲ. ಕಾಮಗಾರಿ ನಡೆಯುತ್ತಿದೆ ಹಾಗಾಗಿ ಸುಮ್ಮನೆ ಗಸ್ತು ತಿರುಗುವುದು ಎಂದು ಸಂಭಾಷಣೆ ವೇಳೆ ಒಬ್ಬರು ನಿರ್ಲಕ್ಷದಿಂದ ಮಾತನಾಡಿದ್ದಾರೆ ಎನ್ನಲಾಗಿದೆ.

 

  

 

click me!