ನವಾಜ್ ಷರೀಪ್ ಬಂದಾಗ ಚಹಾ ಮಾಡಿಕೊಟ್ರು; ಪಿಣರಾಯಿ ಬಂದಾಗ ಬೊಬ್ಬೆಯಿಟ್ರು

By Suvarna Web DeskFirst Published Feb 27, 2017, 5:00 PM IST
Highlights

ಪಿಣರಾಯಿ ಮಂಗಳೂರು ಭೇಟಿ ವಿರೋಧಿಸಿ ಬಂದ್ ಆಚರಿಸಿದ್ದು ಸರಿಯಲ್ಲ ಎಂದು ಆಹಾರ ಸಚಿವ ಖಾದರ್ ಅಭಿಪ್ರಾಯಪಟ್ಟಿದ್ದಾರೆ.

ವಿಕಾಸಸೌಧ(ಫೆ.27): ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಭಾರತಕ್ಕೆ ಬಂದಾಗ ನಮ್ಮ ಪ್ರಧಾನಿ ಚಹ ಮಾಡಿಕೊಟ್ಟರೂ ತುಟಿ ಬಿಚ್ಚದ ಇವರು ಪಕ್ಕದ ರಾಜ್ಯದ ಮುಖ್ಯಮಂತ್ರಿ ನಮ್ಮ ಜಿಲ್ಲೆಗೆ ಬಂದಾಗ ಬೊಬ್ಬೆಯಿಡುವುದೇಕೆ ಎಂದು ಆಹಾರ ಸಚಿವ ಯು.ಟಿ ಖಾದರ್ ಪ್ರಶ್ನಿಸಿದ್ದಾರೆ.

ಮಂಗಳೂರಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಭೇಟಿಗೆ ವಿರೋಧ ವ್ಯಕ್ತಪಡಿಸಿದ ಹಿಂದುಪರ ಸಂಘಟನೆಗಳ ಮೇಲೆ ಹರಿಹಾಯ್ದ ಖಾದರ್, ಪಾಕ್ ಪ್ರಧಾನಿ ಬಂದಾಗ ವಿರೋಧ ವ್ಯಕ್ತಪಡಿಸದವರು ಕೇರಳ ಮುಖ್ಯಮಂತ್ರಿ ಬಂದಾಗ ವಿರೋಧ ವ್ಯಕ್ತಪಡಿಸಿದ್ದಾರೆ. ಪಿಣರಾಯಿ ಮಂಗಳೂರು ಭೇಟಿ ವಿರೋಧಿಸಿ ಬಂದ್ ಆಚರಿಸಿದ್ದು ಸರಿಯಲ್ಲ ಎಂದು ಆಹಾರ ಸಚಿವ ಖಾದರ್ ಅಭಿಪ್ರಾಯಪಟ್ಟಿದ್ದಾರೆ.

ಪಿಣರಾಯಿ ವಿಜಯನ್ ವಿರೋಧಿಗಳಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಸಂವಿಧಾನ ವಿರೋಧಿಗಳನ್ನು ಕುರಿತಾಗಿ ಆ ಮಾತನ್ನಾಡಿದ್ದೇನೆ. ಬಸ್'ಗೆ ಕಲ್ಲು ತೂರಿದ್ದು, ಫ್ಲೆಕ್ಸ್'ಗೆ ಬೆಂಕಿಯಿಟ್ಟ ಸಂಘಟನೆಗಳ ನಡೆ ಸರಿಯಲ್ಲ ಎಂದು ಖಾದರ್ ಹೇಳಿದ್ದಾರೆ.

click me!