
ಕಠ್ಮಂಡು(ನ.25): ಭಾರತೀಯ ರಿಸರ್ವ್ ಬ್ಯಾಂಕ್ ವಿದೇಶ ವಿನಿಮಯ ನಿರ್ವಹಣಾ ಕಾಯ್ದೆ ಅಡಿ ಹೊಸ ಅಧಿಸೂಚನೆ ಪ್ರಕಟಿಸುವವರೆಗೂ ರದ್ದುಗೊಂಡಿರುವ 500 ಮತ್ತು 1000 ಮುಖಬೆಲೆಯ ನೋಟುಗಳ ಬದಲಾವಣೆ ಮಾಡಲು ನೇಪಾಳ ಸರ್ಕಾರ ಬ್ರೇಕ್ ಹಾಕಿದೆ.
ಭಾರತದಲ್ಲಿ ರದ್ದುಗೊಂಡಿರುವ 500-1000 ನೋಟುಗಳ ಹಿಂಪಡೆದು 2000 ಮತ್ತು 500ರ ಹೊಸ ನೋಟುಗಳ ವಿನಿಮಯವನ್ನು ನೇಪಾಳದ ಕೇಂದ್ರ ಬ್ಯಾಂಕ್ ರದ್ದುಪಡಿಸಿದೆ. ಭಾರತ ಮತ್ತು ನೇಪಾಳ ಗಡಿ ಸಂಚಾರ ಮುಕ್ತವಾಗಿರುವ ಹಿನ್ನೆಲೆಯಲ್ಲಿ ಭಾರತದ ಹೊಸ ನೋಟುಗಳು ಬಹುಬೇಗ ನೇಪಾಳ ಮಾರುಕಟ್ಟೆಯನ್ನು ಪ್ರವೇಶಿಸಿವೆ.
ಆರ್‌ಬಿಐ ಅನುಮತಿಯಂತೆ ಒಬ್ಬ ನೇಪಾಳಿ 25 ಸಾವಿರ ರುಪಾಯಿ ಇಟ್ಟುಕೊಳ್ಳಬಹುದಾಗಿದ್ದು ಇಷ್ಟು ಮೊತ್ತದ ಹಳೆಯ ನೋಟುಗಳನ್ನು ಬದಲಿಸುವುದು ಕಷ್ಟದ ಕೆಲಸವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.