ಖಾತೆಯಲ್ಲಿ ಕಪ್ಪು ಹಣ ತುಂಬಿದವರಿಗೆ ಕಾದಿದೆ ಭಾರಿ ಕಂಟಕ..!

By suvarna web deskFirst Published Nov 25, 2016, 4:52 AM IST
Highlights

ಕಪ್ಪು ಹಣಕ್ಕೆ ಹೆಚ್ಚಿನ ತೆರೆಗೆ ವಿಧಿಸುವ ಸಲುವಾಗಿ ಹೊಸ ಕಾನೂನನ್ನೇ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಇರುವ ಕಾನೂನಿಗೆ ಒಂದಷ್ಟು ತಿದ್ದುಪಡಿ ಮಾಡಲು ಚಿಂತನೆ ನಡೆದಿದೆ ಎನ್ನಲಾಗಿದೆ. 

ನವದೆಹಲಿ(ನ.25): ನೋಟು ನಿಷೇಧ ಮಾಡಿದ್ದ ಕೇಂದ್ರ ಸರ್ಕಾರ ತನ್ನ ಮುಂದಿನ ಟಾರ್ಗೆಟ್ ಅನ್ನು ಖಾತೆಯಲ್ಲಿ ಕಪ್ಪು ಹಣ ತುಂಬಿದವರ ಮೇಲೆ ಇರಿಸಿದ್ದು, ದಾಖಲೆ ಇಲ್ಲದ ಹಣದ ಮೇಲೆ ಭಾರಿ ಪ್ರಮಾಣದ ತೆರಿಗೆ ವಿಧಿಸಲು ನಿರ್ಧರಿಸಿದೆ ಎನ್ನುವ ಸುದ್ದಿ ಹೊರ ಬಿದ್ದಿದೆ. 

ಕಪ್ಪು ಹಣಕ್ಕೆ ಹೆಚ್ಚಿನ ತೆರೆಗೆ ವಿಧಿಸುವ ಸಲುವಾಗಿ ಹೊಸ ಕಾನೂನನ್ನೇ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಇರುವ ಕಾನೂನಿಗೆ ಒಂದಷ್ಟು ತಿದ್ದುಪಡಿ ಮಾಡಲು ಚಿಂತನೆ ನಡೆದಿದೆ ಎನ್ನಲಾಗಿದೆ. 

Latest Videos

ಈ ಕಾರಣಕ್ಕಾಗಿ 500 ಮತ್ತು 1000 ರು. ನೋಟುಗಳನ್ನು ನಿಷೇಧ ಮಾಡಿದ ಬಳಿಕ ಖಾತೆಗಳಲ್ಲಿ ತುಂಬುತ್ತಿರುವ ಹಣದ ಮೇಲೆ ತೀವ್ರ ನಿಗಾ ವಹಿಸುತ್ತಿದೆ. ದಾಖಲೆ ಇಲ್ಲದ ಠೇವಣಿ  ಮೇಲೆ ಬರೊಬ್ಬರಿ ಶೇ.60ರಷ್ಟು ತೆರಿಗೆ ವಿಧಿಸುವ ಸಾಧ್ಯತೆ ಇದೆ.

ಈ ಹಿಂದೆ ಕೇಂದ್ರ ಸರ್ಕಾರ ಶೇ.45ರಷ್ಟು ತೆರಿಗೆ ವಿಧಿಸಿತ್ತು. ಆದರೆ ಇದಕ್ಕೆ ಕೇಂದ್ರ ಸರ್ಕಾರ ನೀಡಿದ್ದ ಕಾಲಾವಕಾಶ ಮುಗಿದಿದ್ದು, ಹಾಗಾಗಿ ದಾಖಲೆ  ಇಲ್ಲದ ಹಣಕ್ಕೆ ಶೇ.60ರಷ್ಟು ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗಿದ್ದು, ಈ ಕುರಿತು ಶೀಘ್ರವೆ ಅಧಿಕೃತ ಘೋಷಣೆ ಹೊರ ಬರಲಿದೆ. 

click me!