ಇಸ್ರೇಲ್ ಕಡೆಗಣನೆ: ಯುನೆಸ್ಕೋಗೆ ಅಮೆರಿಕ ಗುಡ್‌ಬೈ

By Suvarna Web DeskFirst Published Oct 13, 2017, 4:42 PM IST
Highlights

ವಿಶ್ವಸಂಸ್ಥೆಯ ಸಾಂಸ್ಕೃತಿಕ ಸಂಸ್ಥೆ ಯುನೆಸ್ಕೋ ‘ಇಸ್ರೇಲ್-ವಿರೋಧಿ’ ನಿಲುವು ಹೊಂದಿದೆ ಎಂದು ಆರೋಪಿಸಿರುವ ಅಮೆರಿಕ, ಯುನೆಸ್ಕೋದ ತನ್ನ ಸದಸ್ಯತ್ವವನ್ನು ಹಿಂಪಡೆಯುವುದಾಗಿ ಘೋಷಿಸಿದೆ.

ವಾಷಿಂಗ್ಟನ್: ವಿಶ್ವಸಂಸ್ಥೆಯ ಸಾಂಸ್ಕೃತಿಕ ಸಂಸ್ಥೆ ಯುನೆಸ್ಕೋ ‘ಇಸ್ರೇಲ್-ವಿರೋಧಿ’ ನಿಲುವು ಹೊಂದಿದೆ ಎಂದು ಆರೋಪಿಸಿರುವ ಅಮೆರಿಕ, ಯುನೆಸ್ಕೋದ ತನ್ನ ಸದಸ್ಯತ್ವವನ್ನು ಹಿಂಪಡೆಯುವುದಾಗಿ ಘೋಷಿಸಿದೆ.

2018, ಡಿ. 31ರಿಂದ ನಿರ್ಣಯ ಅನ್ವಯವಾಗಲಿದೆ. ಇದರ ಬೆನ್ನಲ್ಲೇ ಇಸ್ರೇಲ್ ಸಹ ಯುನೆಸ್ಕೋದಿಂದ ಹೊರಬರುವುದಾಗಿ ಹೇಳಿದೆ.

ಇದರ ಹೊರತಾಗಿಯೂ, ಅಮೆರಿಕದ ಟ್ರಂಪ್ ಆಡಳಿತದ ಜತೆಗಿನ ವಿಶ್ವಸಂಸ್ಥೆಯ ಸಂಬಂಧಕ್ಕೆ ಧಕ್ಕೆಯಾಗಲ್ಲ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟಾನಿಯೊ ಗುಟೆರಸ್ ಅವರ ವಕ್ತಾರ ತಿಳಿಸಿದ್ದಾರೆ.

ಅಲ್ಲದೆ, ಅಮೆರಿಕದ ನಿರ್ಧಾರಕ್ಕೆ ವಿಶ್ವಸಂಸ್ಥೆ ವಿಷಾದಿಸಿದೆ.

click me!