ಪುಲ್ವಾಮಾ ಘಟನೆಗೆ ಉತ್ತರ ನೀಡಬೇಕು : ಉರಿ ನಟ

Published : Feb 17, 2019, 10:50 AM IST
ಪುಲ್ವಾಮಾ ಘಟನೆಗೆ ಉತ್ತರ ನೀಡಬೇಕು :  ಉರಿ ನಟ

ಸಾರಾಂಶ

ಸಿಆರ್‌ಪಿಎಫ್‌ ಯೋಧರನ್ನು ಬಲಿ ಪಡೆದ ಉಗ್ರರ ಕೃತ್ಯವನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದು ಹಾಗೂ, ಮರೆಯಲೂ ಬಾರದು ಎಂದು ‘ಉರಿ: ದಿ ಸರ್ಜಿಕಲ್‌ ಸ್ಟ್ರೈಕ್‌’ ಸಿನಿಮಾ ನಟ ವಿಕ್ಕಿ ಕೌಶಾಲ್‌ ಅವರು ಹೇಳಿದ್ದಾರೆ.  

ಮುಂಬೈ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರನ್ನು ಬಲಿ ಪಡೆದ ಉಗ್ರರ ಕೃತ್ಯವನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದು ಹಾಗೂ, ಮರೆಯಲೂ ಬಾರದು ಎಂದು ‘ಉರಿ: ದಿ ಸರ್ಜಿಕಲ್‌ ಸ್ಟ್ರೈಕ್‌’ ಸಿನಿಮಾದಲ್ಲಿ ಸೇನಾಧಿಕಾರಿ ಪಾತ್ರ ನಿರ್ವಹಿಸಿದ ವಿಕ್ಕಿ ಕೌಶಾಲ್‌ ಅವರು ಹೇಳಿದ್ದಾರೆ.

ಸಿನಿಮಾ ಮತ್ತು ಟೀವಿ ಕಲಾವಿದರ ಅಸೋಸಿಯೇಷನ್‌(ಸಿಐಎನ್‌ಟಿಎಎ) ಹಾಗೂ ಆ್ಯಕ್ಟ್ ಫೆಸ್ಟ್‌ 2019 ಕಾರ್ಯಕ್ರಮದಲ್ಲಿ ಮಾತನಾಡಿದ ಕೌಶಾಲ್‌, ‘40 ಸಿಆರ್‌ಪಿಎಫ್‌ ಯೋಧರನ್ನು ಬಲಿಪಡೆದ ಪುಲ್ವಾಮಾ ದುಷ್ಕೃತ್ಯಕ್ಕೆ ಉತ್ತರ ನೀಡಬೇಕಿದೆ,’ ಎಂದು ಪ್ರತಿಪಾದಿಸಿದರು. 

ಇನ್ನು ಸರ್ಜಿಕಲ್‌ ಸ್ಟ್ರೈಕ್‌ ನಡೆಸಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಬಗ್ಗೆ ಹೆಚ್ಚು ಜ್ಞಾನ ನನಗಿಲ್ಲ. ಸರ್ಜಿಕಲ್‌ ಸ್ಟ್ರೈಕ್‌ ಮಾಡಬೇಕು, ಹೀಗೆ ಆಗಬೇಕು ಎಂದು ಹೇಳುವುದು ಸುಲಭ. ಈ ಕುರಿತು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ,’ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
India Latest News Live: ಕೋಲ್ಕತಾ ಸ್ಟೇಡಿಯಂನಿಂದ ಲಿಯೋನೆಲ್ ಮೆಸ್ಸಿ ಬೇಗ ನಿರ್ಗಮನ; ಮಿತಿಮೀರಿದ ಅಭಿಮಾನಿಗಳ ದಾಂಧಲೆ!