
ಇಂಡಿ: ಬಿಜೆಪಿ ಪರಿವರ್ತನಾ ರ್ಯಾಲಿ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಶನಿವಾರ ಆಯೋಜಿಸಿದ್ದ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರು ದಾಂಧಲೆ ನಡೆಸಿದ್ದರಿಂದ ಮನನೊಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ರಾತ್ರಿ ಉಪವಾಸ ಮಲಗಿದ ಪ್ರಸಂಗ ನಡೆದಿದೆ.
ಯಾತ್ರೆ ಮುಗಿದ ನಂತರ ಪಟ್ಟಣದ ಅಮರ್ ಇಂಟರ್ ನ್ಯಾಷನಲ್ ಹೋಟೆಲ್‌ನಲ್ಲಿ ಬಿಎಸ್ವೈ ವಾಸ್ತವ್ಯಕ್ಕೆ ಇಂಡಿ ಬಿಜೆಪಿ ಮಂಡಲದ ವತಿಯಿಂದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಪರಿವರ್ತನಾ ಸಮಾವೇಶದಲ್ಲಿ ರ್ಯಾಲಿಯ ಯಶಸ್ಸಿಗೆ ಬಿಎಸ್‌ವೈ ಅವರು ಮಾಜಿ ಶಾಸಕ ರವಿಕಾಂತ ಪಾಟೀಲರನ್ನು ಹೊಗಳಿದ್ದರಿಂದ ಸ್ಥಳೀಯ ಬಿಜೆಪಿ ಮುಖಂಡರು ತೀವ್ರ ಅಸಮಾಧಾನಗೊಂಡಿದ್ದರು.
ಬಿಎಸ್‌ವೈ ಭಾಷಣ ಮಾಡುತ್ತಿದ್ದ ಸಮಯದಲ್ಲೇ ಕೆಲವರು ವೇದಿಕೆ ಏರಿ ಮೈಕ್ ಕಿತ್ತೆಸೆದು, ಮಣ್ಣು ತೂರಿ ಆಕ್ರೋಶ ಹೊರಹಾಕಿದ್ದರು. ಜತೆಗೆ, ಬಿಎಸ್‌ವೈ ತಂಗಿದ್ದ ಹೋಟೆಲ್‌ನತ್ತ ಸುಳಿಯದೆ ಅಸಮಾಧಾನ ಹೊರಹಾಕಿದ್ದರು. ಇದರಿಂದ ಮನನೊಂದಿದ್ದ ಬಿಎಸ್‌ವೈ ರಾತ್ರಿ ಉಪವಾಸವೇ ಮಲಗಿದರು ಎಂದು ಮೂಲಗಳು ತಿಳಿಸಿವೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.