ಮಲ್ಯ ಗಡಿಪಾರು ಅರ್ಜಿ : ಲಂಡನ್’ನಲ್ಲಿ ಇಂದಿನಿಂದ ವಿಚಾರಣೆ

By Suvarna Web DeskFirst Published Dec 4, 2017, 3:06 PM IST
Highlights

9 ಸಾವಿರ ಕೋಟಿ ರು. ಸಾಲ ಪಡೆದು ಮರುಪಾವತಿಸದೇ ಬ್ರಿಟನ್’ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಗಡಿಪಾರು ಕುರಿತಾದ ಅರ್ಜಿಯ ವಿಚಾರಣೆ ಸೋಮವಾರದಿಂದ ಡಿ.14ರವರೆಗೂ ಲಂಡನ್ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಯಲಿದೆ.

ಲಂಡನ್(ಡಿ.4):  ಭಾರತೀಯ ಬ್ಯಾಂಕುಗಳಿಂದ 9 ಸಾವಿರ ಕೋಟಿ ರು. ಸಾಲ ಪಡೆದು ಮರುಪಾವತಿಸದೇ ಬ್ರಿಟನ್’ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಗಡಿಪಾರು ಕುರಿತಾದ ಅರ್ಜಿಯ ವಿಚಾರಣೆ ಸೋಮವಾರದಿಂದ ಡಿ.14ರವರೆಗೂ ಲಂಡನ್ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಯಲಿದೆ.

ಇದೇ ಪ್ರಕರಣ ಸಂಬಂಧ ಸ್ಕಾಟ್ಲೆಂಡ್ ಯಾರ್ಡರ್ ಪೊಲೀಸರು ವರ್ಷಾರಂಭದಲ್ಲಿ ಮಲ್ಯರನ್ನು ಬಂಧಿಸಿದ್ದರು. 5.65 ಕೋಟಿ ರು. ಮೊತ್ತದ ಬಾಂಡ್ ನೀಡಿ ಜಾಮೀನಿನ ಮೇಲೆ ಮಲ್ಯ ಹೊರಗಿದ್ದಾರೆ. ಗಡಿಪಾರು ಕುರಿತ ಪ್ರಕರಣದ ತೀರ್ಪು ಮುಂದಿನ ವರ್ಷಾರಂಭದಲ್ಲಿ ಹೊರಬರಬಹುದು ಎಂಬ ನಿರೀಕ್ಷೆ ಇದೆ. ಆದಾಗ್ಯೂ ಮಲ್ಯಗೆ ಮೇಲ್ಮನವಿ ಸಲ್ಲಿಸುವ ಅವಕಾಶ ಇದ್ದೇ ಇರುವುದರಿಂದ ಸದ್ಯಕ್ಕೆ ಅವರು ಗಡೀಪಾರಾಗಿ ಭಾರತಕ್ಕೆ ಬರುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಭಾರತೀಯ ಜೈಲುಗಳಲ್ಲಿ ವ್ಯವಸ್ಥೆ ಸರಿ ಇಲ್ಲ. ಅಲ್ಲಿಗೆ ಹೋದರೆ ತಮ್ಮ ಪ್ರಾಣಕ್ಕೆ ಅಪಾಯವಿದೆ ಎಂಬ ನೆಪಗಳನ್ನು ಮಲ್ಯ ಈಗಾಗಲೇ ಹೇಳಿದ್ದಾರೆ. ಮತ್ತೊಂದೆಡೆ, ಕ್ರಿಮಿನಲ್ ಹಾಗೂ ವಂಚನೆ ಕಾನೂನುಗಳ ವಿಚಾರದಲ್ಲಿ ಬ್ರಿಟನ್’ಲ್ಲಿ ಪ್ರಸಿದ್ಧರಾಗಿರುವ ವಕೀಲ ಕ್ಲಾರ್ ಮಾಂಟ್ಗೊಮೆರಿ ಅವರು ಈ ಪ್ರಕರಣದಲ್ಲಿ ಮಲ್ಯ ಪರವಾದ ಮಂಡಿಸಲಿದ್ದಾರೆ.

click me!