
ಬೆಂಗಳೂರು (ಸೆ.24): ಡಿಫರೆಂಟ್ ಡಿಫರೆಂಟ್ ಸ್ಟೈಲಿನಲ್ಲಿ ಸಿನಿಮಾಗಳನ್ನು ಮಾಡಿ ಚಿತ್ರರಂಗದಲ್ಲಿ ಮಿಂಚಿದ್ದ ರಿಯಲ್ ಸ್ಟಾರ್ ಉಪ್ಪೇಂದ್ರ ರಾಜಕೀಯಕ್ಕೂ ಎಂಟ್ರಿ ಕೊಡಲು ಮುಂದಾಗಿರೋದು ಹಳೇ ವಿಷಯ. ಹೊಸ ವಿಷಯ ಏನಪ್ಪಾ ಅಂದ್ರೆ ತಮ್ಮ ಪ್ರಜಾಕೀಯಕ್ಕಾಗಿ ಉಪ್ಪಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರತಿ ವಾರ ಫೇಸ್’ಬುಕ್ ಲೈವ್’ನಲ್ಲಿ ಉಪ್ಪಿ ಬರಲಿದ್ದು ಪ್ರತಿ ಕ್ಷೇತ್ರಕ್ಕೂ ಸಂಬಂಧಪಟ್ಟಂತೆ ಆಯಾ ಕ್ಷೇತ್ರಗಳ ಪರಿಣಿತರೊಂದಿಗೆ ಪರಿಹಾರಗಳನ್ನೂ ಹುಡುಕಲಿದ್ದಾರಂತೆ.
ರಿಯಲ್ ಸ್ಟಾರ್ ಉಪೇಂದ್ರ ತಮ್ಮ ರಾಜಕೀಯ ಎಂಟ್ರಿಗೆ ಸದ್ದಿಲ್ಲದೇ ವೇದಿಕೆಯನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ. ರಾಜಕೀಯದ ಬದಲಿಗೆ ಪ್ರಜಾಕೀಯ ಬರಬೇಕು ಅನ್ನೋ ಕನಸಿನೊಂದಿಗೆ ಹೊರಟಿರೋ ಉಪ್ಪಿ ಅದಕ್ಕಾಗಿ ವಾರಕ್ಕೆ ಒಮ್ಮೆ ಫೇಸ್’ಬುಕ್ ಲೈವ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರತೀವಾರ ಒಂದೊಂದು ವಿಚಾರದ ಬಗ್ಗೆ ಬೇರೆ ಬೇರೆ ಕ್ಷೇತ್ರದ ತಜ್ಞರ ಜೊತೆ ಚರ್ಚೆ ನಡೆಸಲಿರೋ ಉಪೇಂದ್ರ ಮುಂದೆ ಆ ಸಮಸ್ಯೆಗಳಿಗೆ ಯಾವ ರೀತಿ ಪರಿಹಾರ ಕಂಡುಕೊಳ್ಳಬೇಕು ಅನ್ನೋದನ್ನೂ ಕೂಡಾ ಜನರ ಜೊತೆ ಹಂಚಿಕೊಳ್ಳಲಿದ್ದಾರಂತೆ. ಈ ವಾರ ರೈತರ ಸಮಸ್ಯೆಗಳ ಬಗ್ಗೆ ವಿಷಯ ತಜ್ಞರ ಜೊತೆ ಚರ್ಚೆ ನಡೆಸಿ, ಯುವಕರು ಆದಷ್ಟು ಹಳ್ಳಿಗಳಿಂದ ನಗರಗಳಿಗೆ ವಲಸೆ ಬರೋದನ್ನು ಬಿಟ್ಟು, ಹಳ್ಳಿಯಲ್ಲಿಯೇ ಬೇಸಾಯದಲ್ಲಿ ತೊಡಗಬೇಕು ಹಾಗೂ ಸಾವಯುವ ಪದ್ದತಿಯಲ್ಲಿ ಬೆಳೆ ಬೆಳೆಯುವುದನ್ನು ರೂಢಿಸಿಕೊಳ್ಳಬೇಕು ಅಂತ ಕರೆ ಕೊಟ್ಟರು.
ಇನ್ನು ಈ ವಾರ ಕೆಲವು ರೈತ ಮುಖಂಡರ ಜೊತೆ ಸಾವಯುವ ಕೃಷಿ, ಮಿಶ್ರ ಬೆಸಾಯ ಇನ್ನಿತರ ವಿಚಾರಗಳ ಜೊತೆ ಚರ್ಚೆ ಮಾಡಿದ ಉಪ್ಪಿ , ಇಂತಹಾ ಪದ್ದತಿಗಳಿಂದ ರೈತ ಯಾವತ್ತೂ ಆತ್ಮಹತ್ಯೆಗೆ ಒಳಗಾಗುವಂತಹ ಪರಿಸ್ಥಿತಿ ಬರೋದಿಲ್ಲ, ಶೂನ್ಯ ಬಂಡವಾಳದಿಂದ ಲಕ್ಷಗಟ್ಟಲೆ ಹಣ ಗಳಿಸಬಹುದು ಅನ್ನೋದನ್ನು ಉದಾಹರಣೆ ಸಮೇತ ವಿವರಿಸಿದರು. ಕುಮಾರಸ್ವಾಮಿ ಎಂಬ ರೈತರೊಬ್ಬರು ತಾವೂ ಕೂಡಾ ಇದೇ ರೀತಿಯಲ್ಲಿ ಬೆಳೆ ಬೆಳೆದಿರೋದನ್ನು ಅಂಕಿ ಅಂಶಗಳ ಸಹಿತ ಬಿಡಿಸಿಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.