
ಬೆಂಗಳೂರು (ಸೆ.24): ನೀರಿನಲ್ಲಿ ಮುಳುಗುತ್ತಿದ್ದ ಬಾಲಕನ್ನ ಮತ್ತೊಬ್ಬ ಬಾಲಕ ರಕ್ಷಿಸುವುದರ ಮೂಲಕ ಸಾಹಸ ಮೆರೆದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ನಿನ್ನೆ ಸಂಜೆ ಶಿವಮೊಗ್ಗ ಹೊರವಲಯದ ತ್ರಿಮೂರ್ತಿ ನಗರದ ಪಕ್ಕದಲ್ಲಿ ಹರಿಯುವ ತುಂಗಾ ನಾಲೆಯಲ್ಲಿ ಇಬ್ಬರು ಬಾಲಕರು ಈಜಲು ತೆರಳಿದ್ದರು. ಬಾಲಕರು ಥರ್ಮಾಕೂಲ್ ಶೀಟ್ ಸಹಾಯದಿಂದ ಈಜಾಡುತ್ತಿದ್ದರು. ಇದ್ದಕ್ಕಿದ್ದಂತೆ ಶೀಟ್ ಮಗುಚಿ ಇಬ್ಬರೂ ನೀರಿನಲ್ಲಿ ಒದ್ದಾಡತೊಡಗಿದರು. ಈ ವೇಳೆ ದೂರದಲ್ಲಿದ್ದ ಕೃಷ್ಣನಾಯ್ಕ ಎಂಬ ಬಾಲಕ ಇವರ ಒದ್ದಾಟ ನೋಡಿ ನಾಲೆಯ ಹತ್ತಿರ ಬಂದವನೇ ನೀರಿಗೆ ಹಾರಿಬಿಟ್ಟಿದ್ದ. ಜೀವದ ಹಂಗು ತೊರೆದು ನೀರಿಗೆ ಹಾರಿ ದರ್ಶನ್ ಎಂಬ ಬಾಲಕನ್ನ ರಕ್ಷಿಸಿದ್ದಾನೆ. ಘಟನೆಯಲ್ಲಿ ಮತ್ತೊಬ್ಬ ಬಾಲಕ ಅನೀಶ್ ಮೃತಪಟ್ಟಿದ್ದಾನೆ. ಸಾಹಸ ಮೆರೆದ ಕೃಷ್ಣನಾಯಕ್ ಸಮಯಪ್ರಜ್ಞೆಗೆ ಶಿವಮೊಗ್ಗ ಜನತೆಯ ಶ್ಲಾಘನೆ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.