ಛೀ.. ನಾಚಿಕೆಗೇಡು.. ಪೇಪರ್ ಲೀಕ್ ಮಾಡಿ ಮಾನ ಹರಾಜು ಹಾಕಿದ್ರು!

Published : Jun 29, 2018, 06:36 PM ISTUpdated : Jun 29, 2018, 06:37 PM IST
ಛೀ.. ನಾಚಿಕೆಗೇಡು.. ಪೇಪರ್ ಲೀಕ್ ಮಾಡಿ ಮಾನ ಹರಾಜು ಹಾಕಿದ್ರು!

ಸಾರಾಂಶ

ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದ ಮೇಲೆ ಒಂದೆಲ್ಲಾ ಒಂದು ಪ್ರಕರಣಗಳು, ಹೇಳಿಕೆಗಳು ಕಾಂಗ್ರೆಸ್ ಗೆ ಇರಿಸು ಮುರಿಸು ತರುತ್ತಲೇ ಇವೆ. ಅಂಥದ್ದೆ ಒಂದು ಘಟನೆಗೆ ಕಾಂಗ್ರೆಸ್ ವಕ್ತಾರರ ಪರೀಕ್ಷೆ ಕಾರಣವಾಗಿದೆ. ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕರು ಪಕ್ಷದ ಮಾನವನ್ನು ರಾಷ್ಟ್ರ ಮಟ್ಟದಲ್ಲಿ ಹರಾಜು ಹಾಕಿದ್ದಾರೆ.

ನವದೆಹಲಿ[ಜೂ. 29] ಪಕ್ಷದ ವಕ್ತಾರ ಹುದ್ದೆಗೆ ನಡೆಸಲಾದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ವಾಟ್ಸಪ್ ನಲ್ಲಿ ಲೀಕ್‌ ಆಗಿರುವುದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲಿಗೂ ಆಹಾರವಾಗಿದೆ. ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕರು ಎಡವಟ್ಟು ಮಾಡಿಕೊಂಡಿದ್ದಾರೆ.

ಪಕ್ಷದ ವಕ್ತಾರ ಹುದ್ದೆ ಆಯ್ಕೆಗಾಗಿ ಉತ್ತರ ಪ್ರದೇಶ ಕಾಂಗ್ರೆಸ್‌ ಸಮಿತಿ (ಯುಪಿಸಿಸಿ) ತನ್ನ ಸದಸ್ಯರಿಗೆ ಪರೀಕ್ಷೆಯೊಂದನ್ನು ನಡೆಸಿತ್ತು. ಸುಮಾರು 70 ಮಂದಿ ಈ ಪರೀಕ್ಷೆಯನ್ನು ದಿಢೀರಾಗಿ ಎದುರಿಸಿದ್ದರು. ಆದರೆ ಅಭ್ಯರ್ಥಿಗಳು ಯಾವ ಒತ್ತಡವಿಲ್ಲದೆ ಪರೀಕ್ಷೆ ಎದುರಿಸಿದರು.

ಮಧ್ಯ ಪ್ರದೇಶದ ಚುನಾವಣೆ ಎದುರಾಗುತ್ತಿದ್ದು ಪಕ್ಷದ ಬೆಳವಣಿಗೆ ಮತ್ತು  ಸಂಘಟನೆಗೆ ಅತ್ಯುತ್ತಮರನ್ನು ಆಯ್ಕೆ ಮಾಡಲು ಪರೀಕ್ಷೆ ನಡೆಸಲಾಗಿತ್ತು. ಆದರೆ ಪರೀಕ್ಷೆಗೂ ಮುನ್ನವೇ ಪೇಪರ್ ವಾಟ್ಸಪ್ ಗೋಡೆಯ ಮೇಲಿತ್ತು!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾಂಗ್ರೆಸ್‌ ದೆವ್ವದ ಮನೆ, ದಿನಕ್ಕೊಂದು ಬಿಳಿ-ಕರಿ ದೆವ್ವ ಹೊರ ಬರ್ತಿವೆ: ಆರ್.ಅಶೋಕ್ ವ್ಯಂಗ್ಯ
ಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯ ನಿಯಮ ಶೀಘ್ರ ಜಾರಿ: ಸಚಿವ ಶಿವರಾಜ ತಂಗಡಗಿ