ರಾಷ್ಟ್ರಗೀತೆ ಹಾಡದ ಯುಪಿ ಮದ್ರಸಾದ ಮಾನ್ಯತೆ ರದ್ದು

By Web DeskFirst Published Aug 23, 2018, 12:44 PM IST
Highlights

ಸ್ವಾತಂತ್ರ್ಯ ದಿನಾಚರಣೆಯಲ್ಲಿ  ರಾಷ್ಟ್ರಗೀತೆ ಹಾಡುವುದಕ್ಕೆ ಅವಕಾಶ ನೀಡದ ಮದ್ರಸಾವೊಂದರ ಮಾನ್ಯತೆಯನ್ನು ಉತ್ತರ ಪ್ರದೇಶ ಸರ್ಕಾರ ರದ್ದುಪಡಿಸಿದೆ.

ಮಹಾರಾಜ್‌ಗಂಜ್‌: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಹಾಡಲು ಮಕ್ಕಳಿಗೆ ಅವಕಾಶ ನೀಡದ ಮದ್ರಸಾವೊಂದರ ಮಾನ್ಯತೆಯನ್ನು ರದ್ದುಪಡಿಸಿ ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ಕೊಲ್ಹುಯಿಯ ಬಡಾಗೊ ಪ್ರದೇಶದಲ್ಲಿನ ಮದ್ರಸಾ ಅರೇಬಿಯಾ ಅಹ್ಲೆ ಬಾಲಕಿಯರ ಕಾಲೇಜಿನ ಮಾನ್ಯತೆ ರದ್ದಾಗಿದೆ.

ಆರೋಪಗಳ ತನಿಖೆಗಾಗಿ ರಚಿಸಲಾಗಿದ್ದ ಸಮಿತಿಯ ವರದಿಯ ಆಧಾರದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ಅಧಿಕಾರಿ ಪ್ರಭಾತ್‌ ಕುಮಾರ್‌ ಹೇಳಿದ್ದಾರೆ. ಧ್ವಜಾರೋಹಣದ ಬಳಿಕ ಮದ್ರಸಾದ ಪ್ರಾಂಶುಪಾಲ ಮತ್ತು ಶಿಕ್ಷಕರು, ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡುವುದನ್ನು ತಡೆದಿದ್ದರು. ಈ ಶಿಕ್ಷಕರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದ್ದು, ಅವರ ಬಂಧನವಾಗಿದೆ.

click me!