ಯುಎನ್ ಸಭೆಯಲ್ಲಿ ಜೈಶ್ ಹೆಸರು: ಚೀನಾ ಚುಪ್, ಭಾರತ UP!

By Web DeskFirst Published Feb 22, 2019, 10:45 AM IST
Highlights

ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಭರ್ಜರಿ ಗೆಲುವು| ಪುಲ್ವಾಮಾ ದಾಳಿ ಖಂಡಿಸಿದ ಭದ್ರತಾ ಮಂಡಳಿ | ಜೈಶ್-ಎ-ಮೊಹ್ಮದ್ ಹೆಸರು ಪ್ರಸ್ತಾಪಿಸಿದ ಭದ್ರತಾ ಮಂಡಳಿ ಸಭೆ| ಚೀನಾದ ವಿರೋಧದ ನಡುವೆಯೂ ಗೆದ್ದು ಬೀಗಿದ ಭಾರತ| 

ವಾಷಿಂಗ್ಟನ್(ಫೆ.22): ಪುಲ್ವಾಮ ಉಗ್ರ ದಾಳಿಗೆ ಸಂಬಂಧಿಸಿದಂತೆ ಇಂದು ನಡೆದ ಭದ್ರತಾ ಮಂಡಳಿಯಲ್ಲಿ ಉಗ್ರ ದಾಳಿಯನ್ನು ಖಂಡಿಸಿದ್ದು, ಜೈಶ್-ಎ-ಮೊಹ್ಮದ್ ಉಗ್ರ ಸಂಘಟನೆಯ ಹೆಸರನ್ನೂ ಪ್ರಸ್ತಾಪಿಸಿ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. 

ದಶಕಗಳಿಂದಲೂ ಜೈಷ್ ಇ ಮೊಹಮದ್ ಉಗ್ರ ಸಂಘಟನೆ ಸಂಸ್ಥಾಪಕ ಅಜರ್ ಮಸೂದ್ ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಬೇಕು ಎಂಬ ತನ್ನ ಪ್ರಯತ್ನದಲ್ಲಿ ಚೀನಾ ವಿರುದ್ಧ ಭಾರತ ಮಹತ್ವದ ಮೇಲುಗೈ ಸಾಧಿಸಿದೆ.

ಚೀನಾ ಸೇರಿದಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿರುವ ಶಾಶ್ವತ ಹಾಗೂ ತಾತ್ಕಾಲಿಕ ಸದಸ್ಯ ರಾಷ್ಟ್ರಗಳೂ ಕೂಡ, ಉಗ್ರ ದಾಳಿಗೆ ಸಂಬಂಧಿಸಿದಂತೆ ಭಾರತದೊಂದಿಗೆ ಸಹಕರಿಸಬೇಕು ಎಂದು ಭದ್ರತಾ ಮಂಡಳಿಯಲ್ಲಿ ಅವಿರೋಧ ನಿರ್ಣಯ ಕೈಗೊಳ್ಳಲಾಗಿದೆ. 

ಮುಂದಿನ ದಿನಗಳಲ್ಲಿ ಮತ್ತೆ ಈ ವಿಚಾರವನ್ನು ಭಾರತ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಲಿದೆ. ಕೇವಲ ಭಾರತ ಮಾತ್ರವಲ್ಲದೇ ಅಮೆರಿಕ, ಫ್ರಾನ್ಸ್ ಮತ್ತು ರಷ್ಯಾ ದೇಶಗಳೂ ಕೂಡ ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಪ್ರಸ್ತಾಪ ಮಂಡಿಸುವುದಾಗಿ ಘೋಷಣೆ ಮಾಡಿವೆ.
 

click me!