
ಗುವಾಹಟಿ(ಡಿ.11): ಬಡತನದಿಂದ ಕಂಗೆಟ್ಟಿದ್ದ 24 ವರ್ಷದ ಅವಿವಾಹಿತ ಯುವಕನೋರ್ವ 2 ಸಾವಿರ ರುಪಾಯಿ ಹಣದ ಆಸೆಗಾಗಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಆಘಾತಕಾರಿ ಘಟನೆ ಅಸ್ಸಾಂ ದಿಬ್ರುಗಢ ಜಿಲ್ಲೆಯಲ್ಲಿ ನಡೆದಿದೆ.
ಈ ಶಸ್ತ್ರ ಚಿಕಿತ್ಸೆ ಪರಿಣಾಮ 5 ವರ್ಷ ಮಾತ್ರ ಎಂಬ ಸ್ಥಳೀಯ ಆಶಾ ಕಾರ್ಯಕರ್ತೆಯೊಬ್ಬರ ಸುಳ್ಳು ಮಾಹಿತಿ ಆಧರಿಸಿ ಯುವಕ ಈ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾನೆ ಎನ್ನಲಾಗಿದೆ. ಇದೀಗ ವಿಷಯ ಅರಿವಾದ ಬಳಿಕ ಯುವಕ, ಆಕೆ ವಿರುದ್ಧ ದೂರು ನೀಡಿದ್ದು, ಆಕೆಯನ್ನು ಬಂಧಿಸಲಾಗಿದೆ. ಜೊತೆಗೆ ಘಟನೆ ಕುರಿತು ಆರೋಗ್ಯ ಇಲಾಖೆಗೆ ತನಿಖೆಗೂ ಆದೇಶಿಸಿದೆ.
ಕಮೀಷನ್'ಗೆ ಬಲಿ: ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿ ಕೊಂಡವರಿಗೆ ಸರ್ಕಾರ 2000 ರುಪಾಯಿ ನೆರವು ನೀಡುತ್ತದೆ. ಜೊತೆಗೆ ಹೀಗೆ ಶಸ್ತ್ರಚಿಕಿತ್ಸೆಗೆ ಮನವೊಲಿಸಿದ ಆಶಾ ಕಾರ್ಯಕರ್ತರಿಗೆ 200 ರುಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ. ಹೀಗಾಗಿ ಪೊಮಿಳಾ ಎಂಬ ಆಶಾ ಕಾರ್ಯಕರ್ತೆ, ಸಂತಾನಹರಣ ಶಸ್ತ್ರಚಿಕಿತ್ಸೆಗೆ ಜನರನ್ನು ಪುಸಲಾಯಿಸುತ್ತಿದ್ದಳು. ಒಟ್ಟು 7 ಮಂದಿ ಸಂತ್ರಸ್ತರು ಈ ಶಸ್ತ್ರಚಿಕಿತ್ಸೆಗೊಳಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.