
ಬೆಂಗಳೂರು (ಡಿ.12): ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡ್ಗ ಪ್ರಥಮ್ ಬಹುಭಾಷಾ ನಟ ಪ್ರಕಾಶ್ ರೈ ಏಕವಚನದ ಪದಗಳನ್ನ ಬಳಸುವ ಮೂಲಕ ಪ್ರಥಮ್ ಮತ್ತೆ ಸುದ್ದಿಯಲ್ಲಿದ್ದಾರೆ.
"ತಮಗೆ ತಾವೇ ಹೇಳಿಕೊಳ್ಳುವಂತೆ ದೊಡ್ಡ ನಟ ಪ್ರಕಾಶ್ ರೈ ರವರಿಗೆ ಬಹಿರಂಗ ಪ್ರಶ್ನೆ. "ಏನ್ರೀ Prakash Raj so called ದೊಡ್ಡ ನಟ?! ಅವತ್ತು ಗೌರಿ ಲಂಕೇಶ್ ಹತ್ಯೆಯಾದಾಗ "ಈ ದೇಶದಲ್ಲಿ ಏನಾಗ್ತಿದೆ? ಅದು ಇದು ಅಂತ ಬಾಯಿಗೆ ಬಂದಂಗೆ ಎಲ್ಲಾ ಕೇಳಿ ಕೊನೆಯದಾಗಿ #just_asking ಅಂತಿದ್ರಿ. ಇವತ್ತು ಪರೇಶ್ ಮೇಸ್ತಾ ವಿಕೃತ ರೀತಿಯಲ್ಲಿ ಹತ್ಯೆಯಾಗಿದೆ. ಈ ರಾಜ್ಯದಲ್ಲಿ ಏನಾಗ್ತಿದೆ ಅಂತ ಇವಾಗ ಕೇಳಲ್ವಾ so called ದೊಡ್ಡ ನಟ (ಭಯಂಕರ)? ನರಕ ಅಂದ್ರೇನು ಅಂತ ಸಾಯೋಕೂ ಮುಂಚೆನೇ ತೋರಿಸಿದ್ದಾರೆ ಆ ನಾಯಿಗಳು. ಎಲ್ಲರಿಗೂ ಒಂದೇ ನ್ಯಾಯ ಇರಬೇಕಲ್ವೇನ್ರಿ ರೈ? ಹೊನ್ನಾವರದಲ್ಲಿ ಏನು ನಡೀತು ಅಂತ ಗೊತ್ತೇ ಇಲ್ವೇನ್ರಿ ಪ್ರಕಾಶ್ ರೈ ನಿಮಗೆ? ನಾನು ಹಿಂದು-ಮುಸ್ಲಿಂ ಅಂತ ಮಾತಾಡ್ತಿಲ್ಲ. ಮಾನವೀಯತೆ,ಮನುಷ್ಯತ್ವದ ಬಗ್ಗೆ ಮಾತಾಡ್ತಾ ಇದೀನಿ. ಇದು just asking ಅಲ್ಲ #purposefully_asking" ಎಂದು ತಮ್ಮ ಪೇಜಿನಲ್ಲಿ ಪ್ರಥಮ್ ಬರೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.