ಒಮರ್, ಮೆಹಬೂಬಾ ಮಧ್ಯೆ ವಾಗ್ವಾದ: ಪ್ರತ್ಯೇಕ ಗೃಹ ಬಂಧನಕ್ಕೆ ವ್ಯವಸ್ಥೆ!

Published : Aug 13, 2019, 01:51 PM IST
ಒಮರ್, ಮೆಹಬೂಬಾ ಮಧ್ಯೆ ವಾಗ್ವಾದ: ಪ್ರತ್ಯೇಕ ಗೃಹ ಬಂಧನಕ್ಕೆ ವ್ಯವಸ್ಥೆ!

ಸಾರಾಂಶ

ಜಮ್ಮು- ಕಾಶ್ಮೀರ ದಲ್ಲಿ ಬಿಜೆಪಿಗೆ ಕಾಲೂರಲು ಅವಕಾಶ ನೀಡಿದವರು ಯಾರು?| ಒಮರ್, ಮೆಹಬೂಬಾ ಮಧ್ಯೆ ವಾಗ್ವಾದ: ಪ್ರತ್ಯೇಕ ಗೃಹ ಬಂಧನಕ್ಕೆ ವ್ಯವಸ್ಥೆ! 

ನವದೆಹಲಿ: ಶ್ರೀನಗರ: ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡುವ ನಿರ್ಧಾರ ಕೈಗೊಳ್ಳುವುದಕ್ಕೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಅವರನ್ನು ಹರಿ ನಿವಾಸ್ ಅರಮೆನಯಲ್ಲಿ ಗೃಹ ಬಂಧನದಲ್ಲಿ ಇಡಲಾಗಿತ್ತು.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ಆದರೆ, ಇಬ್ಬರ ಮಧ್ಯೆ ವಾಗ್ವಾದ ಏರ್ಪಟ್ಟ ಹಿನ್ನೆಲೆಯಲ್ಲಿ ಇಬ್ಬರೂ ಮುಖಂಡರನ್ನು ಪ್ರತ್ಯೇಕ ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು- ಕಾಶ್ಮೀರ ದಲ್ಲಿ ಬಿಜೆಪಿಗೆ ಕಾಲೂರಲು ಅವಕಾಶ ನೀಡಿದವರು ಯಾರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಒಮರ್ ಹಾಗೂ ಮುಪ್ತಿ ಮಧ್ಯೆ ವಾಗ್ವಾದ ಏರ್ಪಟ್ಟಿತ್ತು. ಒಂದು ಹಂತದಲ್ಲಿ ಒಮರ್ ಅಬ್ದುಲ್ಲಾ ಮೆಹಬೂಬಾ ಅವರ ಮೇಲೆ ರೇಗಾಡಿದ್ದಾರೆ. ಮುಫ್ತಿ ಮಹಮ್ಮದ್ ಸಯೀದ್ ಕಾಯಿಲೆ ಬೀಳಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇ ಕಾರಣ ಎಂದು ಕಿಚಾಯಿಸಿದ್ದಾರೆ.

ಇವರಿಬ್ಬರ ಮಧ್ಯೆ ತೀವ್ರ ಭಿನ್ನಾಭಿಪ್ರಾಯ ತಲೆದೋರಿದ ಹಿನ್ನೆಲೆಯಲ್ಲಿ ಒಮರ್ ಅವರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆಸು ಧ್ವನಿಯಲ್ಲಿ ಮಾತಾಡಿದ್ದರು ಎನ್ನುವ ಆರೋಪ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್