ಪರಿಸರ ಉಳಿವಿಗೆ ಕೇಂದ್ರದ ಹೊಸ ಸಾರಿಗೆ ಸಚಿವರ ದಿಟ್ಟ ನಿರ್ಧಾರ

By Web DeskFirst Published Jun 3, 2019, 4:54 PM IST
Highlights

ಸಾಲು ಮರದ ತಿಮ್ಮಕ್ಕ ನೆಟ್ಟ ಗಿಡಗಳೂ ಇಂದು ಹೆಮ್ಮರವಾಗಿ ಬೆಳೆದಿವೆ. ರಸ್ತೆ ಅಗಲೀಕರಣಕ್ಕೆ ಮರಗಳನ್ನು ತೆರವು ಮಾಡಬೇಕು ಎಂಬ ಮಾತು ಕೇಳಿಬಂದಿದ್ದು ತಿಮ್ಮಕ್ಕ ಖುದ್ದು ಸಿಎಂಗೆ ಮರ ಉಳಿಸಲು ಮನವು ಮಾಡಿದ್ದಾರೆ. ಆದರೆ ಇನ್ನೊಂದು ಕಡೆ ಕೇಂದ್ರ ಹೆದ್ದಾರಿ ಸಚಿವರು ಹೆದ್ದಾರಿಗಳನ್ನು ಹಸಿರು ಮಾಡುವ ಪಣ ತೊಟ್ಟಿದ್ದಾರೆ.

ನವದೆಹಲಿ[ಜೂ 03] ಕೇಂದ್ರ ಸಾರಿಗೆ ಸಚಿವರಾಗಿ ನಿತಿನ್ ಗಡ್ಕರಿ ಮತ್ತೊಮ್ಮೆ ಅಧಿಕಾರ ವಹಿಸಿಕೊಂಡಿದ್ದಾರೆ. ಅಧಿಕಾರ ವಹಿಸಿಕೊಂಡ ತಕ್ಷಣವೇ ಹೆದ್ದಾರಿ ಪಕ್ಕದಲ್ಲಿ ಹಸಿರು ನಿರ್ಮಾಣ ಮಾಡುವ ಕಾರ್ಯ ಆರಂಭ ಮಾಡಲು ಸಿದ್ಧರಾಗಿದ್ದಾರೆ.

ಮುಂದಿನ ಎರಡೂವರೆ ವರ್ಷ ಕಾಲ ಪ್ರತಿದಿನ 40 ಕಿಮೀ ಹೆದ್ದಾರಿ ನಿರ್ಮಾಣ ಮಾಡುವ ಗುರಿಯನ್ನು ಗಡ್ಕರಿ ಹೊಂದಿದ್ದಾರೆ.  ಐದು ವರ್ಷದ ಪೂರೈಸಿದ ಮೋದಿ ಸರಕಾರದ ಮೊದಲ ಅವಧಿಯಲ್ಲಿ ಗಡ್ಕರಿ ನೇತೃತ್ವದಲ್ಲಿಯೇ ಸಾರಿಗೆ ಇಲಾಖೆ ಪ್ರತಿದಿನ 26 ಕಿಮೀ ನಿರ್ಮಾಣ ಮಾಡುತ್ತಿತ್ತು.

ರಸ್ತೆ ವಿಸ್ತರಣೆಗೆ ಸಾಲು ಮರದ ತಿಮ್ಮಕ್ಕರ ಕನಸು ಬಲಿ?

ಇದು ನನಗೆ ಸಿಕ್ಕಿರುವ ಅತ್ಯುತ್ತಮ ಅವಕಾಶ, 125 ಕೋಟಿ ಸಸಿಗಳನ್ನು ಹೆದ್ದಾರಿ ಇಕ್ಕೆಲಗಳಲ್ಲಿ ನೆಡುವ ಗುರಿ ಸಹ ನಮ್ಮ ಮುಂದಿದೆ. ದೇಶದ ಜನಸಂಖ್ಯೆಯಷ್ಟೆ ಸಸಿಗಳನ್ನು ಬೆಳೆಸಬೇಕು ಎಂಬ ಅಭಿಲಾಷೆ ಇಟ್ಟುಕೊಂಡಿದ್ದೇವೆ ಎಂದು ಗಡ್ಕರಿ ಹೇಳಿದ್ದಾರೆ. ಮುಂಬೈ-ದೆಹಲಿ ಎಕ್ಸ್ ಪ್ರೆಸ್ ಹೆದ್ದಾರಿ ಜತೆಗೆ 12 ಪ್ರಾಜೆಕ್ಟ್ ಗಳು ಮುಂದಿನ ಮೂರು ತಿಂಗಳಲ್ಲಿ ಮುಕ್ತಾಯವಾಗಲಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

click me!