ಅಯೋಧ್ಯೆ ಅಭಿವೃದ್ಧಿಗೆ ಕೇಂದ್ರದಿಂದ 5 ಸಾವಿರ ಕೋಟಿ

By Web DeskFirst Published Feb 6, 2019, 1:35 PM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ಕೇಂದ್ರ ಸರ್ಕಾರ ಅಯೊಧ್ಯೆಯಲ್ಲಿ ಮಹತ್ವದ ಮಹತ್ವದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಸಜ್ಜಾಗಿದೆ. 

ನವದೆಹಲಿ : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ  ರಾಮಜನ್ಮಭೂಮಿ ಅಯೋಧ್ಯೆಯ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರ್ಕಾರ ಭರ್ಜರಿ ಚಾಲನೆ ನೀಡಲು ಸಜ್ಜಾಗಿದೆ. 

ಕೇಂದ್ರ ಸರ್ಕಾರ 5300 ಕೋಟಿ ವೆಚ್ಚದಲ್ಲಿ 6 ಹೆದ್ದಾರಿಗಳ ನಿರ್ಮಾಣ  ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಶೀಘ್ರವೇ ಚಾಲನೆ ನೀಡಲಿದೆ. 

ಧಾರ್ಮಿಕವಾಗಿ ಮಹತ್ವ ಪಡೆದಿರುವ ಇಲ್ಲಿನ 84 ಕೋಸಿ ಪರಿಕ್ರಮ ಮಾರ್ಗ ಹಾಗೂ ರಾಮ ವನ ಗಮನ ಮಾರ್ಗವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. 

ಈ ಎಲ್ಲಾ ಮಹತ್ವದ ಯೋಜನೆಗಳಿಗೆ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ  ನಿತಿನ್ ಗಡ್ಕರಿ ಶೀಘ್ರದಲ್ಲೇ ಚಾಲನೆ ನೀಡಲಿದ್ದಾರೆ. 

2015ಕ್ಕೂ ಮುನ್ನವೇ ಈ ಮಹತ್ವದ ಯೋಜನೆಗಳ ರೂಪು ರೇಷೆಯನ್ನು ತಯಾರಿ ಮಾಡಿದ್ದು, ಆದರೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಭಾರೀ ಯೋಜನೆಗಳಿಗೆ ಚಾಲನೆ ನೀಡುತ್ತಿದೆ.  

ಇಲ್ಲಿನ 84 ಕೋಸಿ ಪರಿಕ್ರಮ ಮಾರ್ಗವನ್ನು ವಿಸ್ತರಣೆ ಮಾಡಿ ನಾಲ್ಕು ಪಥದ ರಸ್ತೆಯನ್ನಾಗಿಸಲಾಗುತ್ತಿದೆ. 250 ಕಿ.ಮೀ ಇರುವ ರಸ್ತೆಯನ್ನು 91 ಕಿ.ಮೀ ನಷ್ಟು ವಿಸ್ತರಣೆ ಮಾಡಲಾಗುತ್ತಿದೆ. 

ಉತ್ತರ ಪ್ರದೇಶದ ಪವಿತ್ರ ನಗರಕ್ಕೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿಟ್ಟಿನಲ್ಲಿ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

click me!