ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಗುಡ್ ನ್ಯೂಸ್

By Web DeskFirst Published Feb 6, 2019, 9:13 AM IST
Highlights

ಕೇಂದ್ರ ಸರ್ಕಾರ ರಾಜ್ಯಕ್ಕೆ ಗುಡ್ ನ್ಯೂಸ್ ಒಂದನ್ನು ನೀಡುತ್ತಿದೆ. ರಾಜ್ಯದ ರಾಯಚೂರು ಜಿಲ್ಲೆಯಲ್ಲಿ  ಐಐಟಿ ಸ್ಥಾಪನೆಗಾಗಿ ಭೂಮಿ ಪರಿಶೀಲನೆ ನಡೆದಿದೆ.

ರಾಯಚೂರು: ಕೇಂದ್ರ ಸರ್ಕಾರ ಜಿಲ್ಲೆಗೆ ಮಂಜೂರು ಮಾಡಿರುವ ಐಐಐಟಿಗೆ ತಾಲೂಕಿನ ವಡವಡಿ ಗ್ರಾಮದಲ್ಲಿ ನಿಗದಿಪಡಿಸಲಾಗಿರುವ 65 ಎಕರೆ ಜಮೀನನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಎಸ್‌.ಎಸ್‌ ಸಂಧು ಅವರ ನೇತೃತ್ವದ ತಂಡವು ಮಂಗಳವಾರ ಪರಿಶೀಲಿಸಿತು. 

ಈ ವೇಳೆ ಜಿಲ್ಲೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಎಸ್‌.ಎಸ್‌. ಸಂಧು ಅವರು ಜಮೀನಿನಲ್ಲಿ ನೀರಿನ ಲಭ್ಯತೆ, ಮಣ್ಣು ಹಾಗೂ ಸಾರಿಗೆ ಸಂಪರ್ಕ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳ ಕುರಿತಂತೆ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು. 

ಬಳಿಕ ಕೇಂದ್ರ ತಂಡವು ಯರಮರಸ್‌ ಸಕ್ರ್ಯುಟ್‌ ಹೌಸ್‌ನಲ್ಲಿ ಜಿಲ್ಲೆಯ ವಿವಿಧ ಸಂಸ್ಥೆಗಳ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿತು. ಐಟಿಬಿಟಿ ನಿರ್ದೇಶಕ ಆರ್‌.ಗಿರೀಶ್‌, ಧಾರವಾಡ ಐಐಐಟಿ ಪೊ›ಫೆಸರ್‌ ಡಾ.ದೀಪಕ್‌, ಬೆಂಗಳೂರು ಐಐಐಟಿ ಸಿಒ ಜಗದೀಶ ಪಾಟೀಲ್‌ ಮತ್ತಿತರರು ಇದ್ದರು.

click me!