ಕಾಂಗ್ರೆಸ್‌ಲ್ಲಿ ಎಲ್ಲವೂ ಸರಿ ಇಲ್ಲ - ಲೋಕಸಭಾ ಚುನಾವಣೆ ಸ್ಪರ್ಧೆ ಇಲ್ಲ : ಮುಖಂಡ

Published : Feb 06, 2019, 12:50 PM ISTUpdated : Feb 06, 2019, 01:25 PM IST
ಕಾಂಗ್ರೆಸ್‌ಲ್ಲಿ ಎಲ್ಲವೂ ಸರಿ ಇಲ್ಲ - ಲೋಕಸಭಾ ಚುನಾವಣೆ ಸ್ಪರ್ಧೆ ಇಲ್ಲ : ಮುಖಂಡ

ಸಾರಾಂಶ

ಕಾಂಗ್ರೆಸ್ ನಲ್ಲಿ ಈಗ ಎಲ್ಲವೂ ಸರಿ ಇಲ್ಲ. ಈ ನಿಟ್ಟಿನಲ್ಲಿ ರಾಜಕಾರಣ ಬೇಸರ ತರಿಸಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಮುಂಬೈ ಕಾಂಗ್ರೆಸ್ ಮುಖಂಡ ಮಿಲಿಂದ್ ಡಿಯೋರಾ ಹೇಳಿದ್ದಾರೆ. 

ಮುಂಬೈ : ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಕಾಂಗ್ರೆಸ್ ಮುಖಂಡರೋರ್ವರು ರಾಜಕಾರಣವನ್ನೇ ತೊರೆಯುವ ಮನಸ್ಸು ಮಾಡಿದ್ದಾರೆ. ಮುಂಬೈ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಂಸದ ಮಿಲಿಂದ್ ಡಿಯೋರಾ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡುವ ಸಾಧ್ಯತೆ  ಇಲ್ಲವೆಂದು  ಹೇಳಿದ್ದಾರೆ. 

ಮುಂಬೈ ಕಾಂಗ್ರೆಸ್ ಘಟಕದ ನಾಯಕರ ನಡೆಯಿಂದ ಬೇಸತ್ತಿದ್ದು, ತೀವ್ರ ಅಸಮಾಧಾನವನ್ನುಂಟು ಮಾಡಿದೆ. ಅಲ್ಲದೇ ಇತ್ತೀಚೆಗಷ್ಟೇ ಕೆಲವು ಕಾಂಗ್ರೆಸ್ ನಾಯಕರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಮುಂಬೈ ಕಾಂಗ್ರೆಸ್ ನಾಯಕತ್ವವನ್ನು ಬದಲಾವಣೆ ಮಾಡಲು ಮನವಿ ಮಾಡಿದ್ದಾರೆ ಎಂದಿದ್ದಾರೆ. 

ಇಲ್ಲಿನ ಕಾಂಗ್ರೆಸ್ ನಾಯಕರು ನಡೆದುಕೊಳ್ಳುವ ರೀತಿಯು ರಾಜಕೀಯವನ್ನೇ ತೊರೆಯಬೇಕೆನ್ನುವಂತೆ ಮಾಡುತ್ತಿದೆ ಎಂದು ಈ ಮೂಲಕ ಮುಂಬೈ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಂಜಯ್ ನಿರುಪಮ್ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿ ಮುಂಬೈ ಕಾಂಗ್ರೆಸ್ ಕ್ರಿಕೆಟ್ ಕ್ರೀಡಾಂಗಣವಾಗಬಾರದು ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

 ಆದರೆ ಕಾಂಗ್ರೆಸ್ ನಾಯಕರ ನಡೆ ಬಗ್ಗೆ ಡಿಯೋರಾ ಮಾಡಿರುವ ಆರೋಪವನ್ನು ಮುಂಬೈ ಘಟಕದ ಅಧ್ಯಕ್ಷ ಸಂಜಯ್ ನಿರುಪಮ್ ಡಿಯೋರಾ ಅಲ್ಲಗಳೆದಿದ್ದಾರೆ.

 

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!