ಸೈಕಲ್ ತುಳಿದುಕೊಂಡೇ ಸಂಸತ್ತು ತಲುಪಿದ ಕೇಂದ್ರ ಸಚಿವ!

By Web DeskFirst Published Jun 26, 2019, 2:37 PM IST
Highlights

ಪರಿಸರ ಉಳಿಸಲು ಸಂಘ, ಸಂಸ್ಥೆಗಳಿಗೇ ಸೇರಬೇಕೆಂದಿಲ್ಲ!| ಕೊಂಚ ಹೊಂದಾಣಿಕೆ ಮಾಡಿಕೊಂಡು ಹೋದ್ರೆ ಅದೇ ನವು ಪರಿಸರಕ್ಕೆ ಕೊಡುವ ಕೊಡುಗೆ| ಕೇಂದ್ರ ಸಚಿವರಾದ್ರೂ ಸೈಕಲ್ ತುಳಿದುಕೊಂಡೇ ಸಂಸತ್ತಿಗೆ ಬರ್ತಾರೆ ಈ ಜನನಾಯಕ| ಪರಿಸರ ಹೀಗೂ ಉಳಿಸಬಹುದು ಎಂದು ತೋರಿಸಿಕೊಟ್ಟ ಸಂಸದ| ಕೇಂದ್ರ ಸಚಿವರ ಸರಳತೆ ಹಾಗೂ ಪರಿಸರ ಪ್ರೇಮಕ್ಕೆ ಸಲಾಂ!

ನವದೆಹಲಿ[ಜೂ.26]: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಹನಗಳ ಸಂಖ್ಯೆ ವೃದ್ಧಿಸುತ್ತಿರುವುದರಿಂದ ವಾಯು ಮಾಲಿನ್ಯವೂ ಹೆಚ್ಚುತ್ತಿದೆ. ಹೀಗಾಗಿ ಜನರ ಜೀವ ಅಪಾಯದಲ್ಲಿದೆ. ವಾಹನಗಳು ಹೊರ ಸೂಸುವ ಹೊಗೆ ಜನರ ಕಣ್ಣು, ಸ್ವಾಶಕೋಶಗಳಿಗೆ ಸೇರುವುದರಿಂದ ಅನೇಕ ರೋಗಗಳನ್ನು ಎದುರಿಸುತ್ತಿದ್ದಾರೆ. ಆದರೆ ಇವೆಲ್ಲದರ ನಡುವೆ ಸಂಸದರೊಬ್ಬರು ತಮ್ಮ ಪರಿಸರ ಪ್ರೇಮಿ ದಿನಚರಿಗೆ ಫೇಮಸ್ ಆಗುತ್ತಿದ್ದಾರೆ. ತಾನೊಬ್ಬ ರಾಜಕಾರಣಿ ಕಾರು ಬೇಕು ಎಂಬ ಶೋಕಿ ಬಿಟ್ಟು, ಸೈಕಲ್ ನಲ್ಲೇ ಸಂಸತ್ತಿಗೆ ತೆರಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Delhi: Union Minister and BJP MP, Mansukh Mandaviya arrives at the Parliament, riding a bicycle. pic.twitter.com/NUbynkDp6S

— ANI (@ANI)

ಹೌದು ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಮನ್‌ಸುಖ್ ಮಾಂಡವೀಯ ಸೈಕಲ್ ತುಳಿದುಕೊಂಡೇ ಸಂಸತ್ತು ಆವರಣಕ್ಕೆ ಬರುತ್ತಾರೆ. ಇವರ ಈ ಸರಳ ನಡೆ ಜನರಿಗೂ ಬಹಳ ಇಷ್ಟವಾಗಿದೆ. ಹೀಗಾಗೇ ಸೈಕಲ್ ನಲ್ಲಿ ತೆರಳುವ ಸಂಸದನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

ಸಂಸದರ ಈ ಪರಿಸರ ಸ್ನೇಹಿ ನಡೆ ಜನರಿಗೆ ಇಷ್ಟವಾಗುತ್ತಿದ್ದರೂ, ಅದೆಷ್ಟು ಮಂದಿ ಅನುಕರಿಸುತ್ತರೆಂದು ತಿಳಿದಿಲ್ಲ. ಆದರೆ ಅವರ ಈ ನಡೆಯಿಂದ ಪರಿಸರದ ಮೇಲೆ ಕೊಂಚವಾದರೂ ಪರಿಣಾಮ ಬೀಳಲಿದೆ. ಇನ್ನು ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಪ್ರಮಾಣವಚನ ಕಾರ್ಯಕ್ರಮಕ್ಕೆ ಮನ್‌ಸುಖ್‌ ಸೈಕಲ್ನಲ್ಲೇ ಬಂದಿದ್ದರು ಎಂಬುವುದು ಗಮನಾರ್ಹ.

ಪರಿಸರ ಪ್ರೇಮ ತೋರಿಸಲು ಯಾವುದೋ ಸಂಘ ಸಂಸ್ಥೆಗೆ ಸೇರಿ, ಹೋರಾಟಗಳನ್ನು ಮಾಡಲೇಬೇಕೆಂದಿಲ್ಲ. ಬದಲಾಗಿ ನಾವೇ ಕೊಂಚ ಹೊಂದಾಣಿಕೆ ಮಾಡಿಕೊಳ್ಳಬೇಕು. ವಾಹನಗಳ ಬಳಕೆ ಕಡಿಮೆ ಮಾಡಿ ಸೈಕಲ್ ಬಳಸಿದರೆ ಇದು ಪರಿಸರ ಉಳಿಸಲು ನಾವು ಕೊಡುವ ಬಹುದೊಡ್ಡ ಕೊಡುಗೆಯಾಗಲಿದೆ.

click me!