ಬಾಲಾಕೋಟ್ ವಾಯುದಾಳಿ ರೂವಾರಿ ಇದೀಗ ‘ರಾ’ ಮುಖ್ಯಸ್ಥ!

By Web Desk  |  First Published Jun 26, 2019, 1:45 PM IST

‘ರಾ’ ಮತ್ತುಯ ಇಂಟೆಲಿಜೆನ್ಸ್ ಬ್ಯುರೋಗೆ ಹೊಸ ಮುಖ್ಯಸ್ಥರ ನೇಮಕ| ಬಾಲಾಕೋಟ್ ವಾಯುದಾಳಿ ಯೋಜನೆಯ ಪ್ರಮುಖ ರೂವಾರಿ ಸಮಂತ್ ಗೋಯಲ್| ಸಮಂತ್ ಗೋಯೆಲ್ ಅವರನ್ನು ರಾ ಮುಖ್ಯಸ್ಥರನ್ನಾಗಿ ನೇಮಿಸಿದ ಪ್ರಧಾನಿ ಮೋದಿ| ಭಾರತದ ಬಾಹ್ಯ ಗುಪ್ತಚರ ಸಂಸ್ಥೆ ರಿಸರ್ಚ್ ಆ್ಯಂಡ್ ಎನಾಲಿಸಿಸ್(R&AW)| ಗೋಯೆಲ್ ನೇಮಕ ಆದೇಶ ಹೊರಡಿಸಿದ ಮೋದಿ ನೇತೃತ್ವದ ಆಯ್ಕೆ ಸಮಿತಿ| ಅರವಿಂದ್ ಕುಮಾರ್ ನೂತನ ಇಂಟೆಲಿಜೆನ್ಸ್ ಬ್ಯುರೋ ಮುಖ್ಯಸ್ಥ| ಭಾರತದ ಆಂತರಿಕ ಗುಪ್ತಚರ ಸಂಸ್ಥೆ ಇಂಟೆಲಿಜೆನ್ಸ್ ಬ್ಯುರೋ(IB)|


ನವದೆಹಲಿ(ಜೂ.26): ಮಹತ್ವದ ಬೆಳವಣಿಗೆಯೊಂದರಲ್ಲಿ ಬಾಲಾಕೋಟ್ ವಾಯುದಾಳಿ ಯೋಜನೆಯ ಪ್ರಮುಖ ರೂವಾರಿ ಸಮಂತ್ ಗೋಯಲ್ ಅವರನ್ನು,  ಭಾರತದ ಬಾಹ್ಯ ಗುಪ್ತಚರ ಸಂಸ್ಥೆ ರಿಸರ್ಚ್ ಆ್ಯಂಡ್ ಎನಾಲಿಸಿಸ್(R&AW) ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

1984ರ ಬ್ಯಾಚ್’ನ ಐಪಿಎಸ್ ಅಧಿಕಾರಿಯಾಗಿರುವ ಸಮಂತ್ ಗೋಯೆಲ್ ಅವರನ್ನು ರಾ ಮುಖ್ಯಸ್ಥರನ್ನಾಗಿ ನೇಮಿಸಿ, ಪ್ರಧಾನಿ ಮೋದಿ ನೇತೃತ್ವದ ಆಯ್ಕೆ ಸಮಿತಿ ಆದೇಶ ಹೊರಡಿಸಿದೆ.

Tap to resize

Latest Videos

ಪಂಜಾಬ್ ಕೆಡರ್ ಅಧಿಕಾರಿಯಾಗಿರುವ ಸಮಂತ್ ಗೋಯೆಲ್, ಖಲಿಸ್ತಾನಿ ಭಯೋತ್ಪಾದಕತೆಯನ್ನು ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ ನಿರ್ವಿಹಿಸಿದ್ದರು. ಅಲ್ಲದೇ ಉರಿ ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಾಕೋಟ್ ಏರ್ ಸ್ಟ್ರೈಕ್ ಯೋಜನೆ ರೂಪಿಸುವಲ್ಲಿಯೂ ತಮ್ಮ ಕೊಡುಗೆ ನೀಡಿದ್ದರು.

ಇದೇ ವೇಳೆ 1984ರ ಬ್ಯಾಚ್’ನ ಐಪಿಎಸ್ ಅಧಿಕಾರಿಯಾಗಿರುವ ಅರವಿಂದ್ ಕುಮಾರ್ ಅವರನ್ನು ಭಾರತದ ಆಂತರಿಕ ಗುಪ್ತಚರ ಸಂಸ್ಥೆ ಇಂಟೆಲಿಜೆನ್ಸ್ ಬ್ಯುರೋ(IB) ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಅಸ್ಸಾಂ ಕೆಡರ್ ಅಧಿಕಾರಿಯಾಗಿರುವ ಅರವಿಂದ್ ಕುಮಾರ್, ನಕ್ಸಲ್ ಸಮಸ್ಯೆ ಮತ್ತು ಕಾಶ್ಮೀರ ಉಗ್ರವಾದ ಹತ್ತಿಕ್ಕುವ ಯೋಜನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.

click me!