
ನವದೆಹಲಿ (ಏ.20): ಇದು ಲಂಡನ್ ಅಥವಾ ನ್ಯೂಯಾರ್ಕ್ನ ಏರ್'ಪೋರ್ಟ್ ಅಲ್ಲ! ಬದಲಿಗೆ ಗುಜರಾತ್'ನ ರಾಜ್'ಕೋಟ್'ನಲ್ಲಿ ಉದ್ಘಾಟಿಸಿದ ಬಸ್'ಸ್ಟಾಂಡ್ ಇದು! ಹಾಗಂತ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಟ್ವಿಟರ್'ನಲ್ಲಿ ತಪ್ಪಾಗಿ ಪೋಸ್ಟ್ ಹಾಕಿಕೊಂಡಿದ್ದು ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಆಗುತ್ತಿದೆ.
ಗುಜರಾತ್'ನ ರಾಜ್'ಕೋಟ್'ನಲ್ಲಿ ಈ ಹೈಟೆಕ್ ಬಸ್'ಸ್ಟಾಂಡ್ ಗೆ ಶಂಕು ಸ್ಥಾಪನೆ ಮಾಡಲಾಗಿದೆ. ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡ ಬಳಿಕ ಅದರ ಹೊರನೋಟ ಹೇಗಿರುತ್ತದೆ ಎನ್ನುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾಗಿದೆ. 3ಡಿ ಸಿಎಡಿ ಮಾದರಿಯಲ್ಲಿ ತೆಗೆದ ಫೋಟೋವನ್ನು ಬಾಬುಲ್ ಸುಪ್ರಿಯೋ ಟ್ವೀಟರ್ ನಲ್ಲಿ ಶೇರ್ ಮಾಡಿ, ಇದು ಇಂಗ್ಲೆಂಡ್ ಅಥವಾ ನ್ಯೂಯಾರ್ಕ್ನ ಏರ್'ಪೋರ್ಟಲ್ಲ. ರಾಜ್ ಕೋಟಲ್ಲಿ ಉದ್ಘಾಟನೆಯಾದ ಬಸ್'ಸ್ಟಾಂಡ್ ಎಂದು ಟ್ವೀಟಿಸಿದ್ದರು. ವಾಸ್ತವವಾಗಿ ಈ ಬಸ್'ಸ್ಟಾಂಡ್ ಇನ್ನೂ ಉದ್ಘಾಟನೆಯಾಗಿಲ್ಲ. ಶಂಕುಸ್ಥಾಪನೆಯಾಗಿದೆ ಅಷ್ಟೇ! ಉದ್ಘಾಟನೆಯೇ ಆಗಿದೆ ಎಂದು ಸಚಿವರು ಮಾಡಿರುವ ಪೋಸ್ಟ್ ಟ್ವೀಟಿಗರ ಆಕ್ರೋಶಕ್ಕೆ ಒಳಗಾಗಿದೆ. ಯಾವಾಗ ಇವರ ಪೋಸ್ಟ್ ಟ್ರೋಲ್ ಆಗಲು ಶುರುವಾಯ್ತೋ, ಬಾಬುಲ್ ಸುಪ್ರಿಯೋ ಮುಜುಗರದಿಂದ ತಪ್ಪಿಸಿಕೊಳ್ಳಲು ನನ್ನ ಕ್ಲಾಸ್'ಮೇಟ್'ವೊಬ್ಬ ಇದನ್ನು ಕಳುಹಿಸಿದ. ನಾನು ಅದನ್ನೇ ಹಾಕಿದೆ ಎಂದು ತೇಪೆ ಹಚ್ಚಿದ್ದಾರೆ. ಪೋಸ್ಟ್ ಮಾಡುವಾಗ ಸ್ವಲ್ಪ ಅಜಾಗರೂಕರಾಗಿ ಸಾಮಾಜಿಕ ಜಾಲಿಗರು ಹೇಗೆ ಪೋಸ್ಟನ್ನು ಜಾಲಾಡುತ್ತಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.