ಪರಿಹಾರ ಕೇಂದ್ರದಲ್ಲಿ ರಾತ್ರಿ ಕಳೆದ ಕೇಂದ್ರ ಸಚಿವ ಅಲ್ಫೋನ್ಸ್‌

By Web DeskFirst Published Aug 23, 2018, 10:50 AM IST
Highlights

ಕೇರಳದ ನಿರಾಶ್ರಿತರ ಶಿಬಿರದಲ್ಲಿ  ಕೇಂದ್ರ ಪ್ರವಾಸೋದ್ಯಮ ಇಲಾಖೆಯ ರಾಜ್ಯ ಸಚಿವ ಅಲ್ಫೋನ್ಸ್‌ ಕಣ್ಣನ್‌ಥಾನಂ ಮಂಗಳವಾರ ರಾತ್ರಿ ಕಳೆದಿದ್ದಾರೆ. ಈ ಫೊಟೊವನ್ನು ಅವರು ಟ್ವಿಟ್ಟರ್ ನಲ್ಲಿ ಶೇರ್ ಮಾಡಿ ಕೊಂಡಿದ್ದಾರೆ. 

ತಿರುವನಂತಪುರ: ಪ್ರವಾಹ ಪೀಡಿತ ಕೇರಳದ ಪರಿಹಾರ ಕೇಂದ್ರವೊಂದರಲ್ಲಿ, ಕೇಂದ್ರ ಪ್ರವಾಸೋದ್ಯಮ ಇಲಾಖೆಯ ರಾಜ್ಯ ಸಚಿವ ಅಲ್ಫೋನ್ಸ್‌ ಕಣ್ಣನ್‌ಥಾನಂ ಮಂಗಳವಾರ ರಾತ್ರಿ ಕಳೆದಿದ್ದಾರೆ. ಚಂಗನಶ್ಶೇರಿಯ ಎಸ್‌ಬಿ ಪ್ರೌಢ ಶಾಲೆಯಲ್ಲಿನ ನಿರಾಶ್ರಿತರ ಶಿಬಿರದಲ್ಲಿ ತಾವು ಮಲಗಿರುವ ಫೋಟೋವನ್ನು ಅಲ್ಪೋನ್ಸ್‌ ಟ್ವೀಟ್‌ ಮಾಡಿದ್ದಾರೆ. 

‘ನಿರಾಶ್ರಿತರ ಪರಿಹಾರ ಕೇಂದ್ರದಲ್ಲೇ ಮಲಗಲು ನಿರ್ಧರಿಸಿದ್ದೇನೆ,’ ಎಂಬ ಕ್ಯಾಪ್ಷನ್‌ ಅನ್ನು ಕ್ಯಾಂಪ್‌ನಲ್ಲೇ ಮಲಗಿದ್ದ ಫೋಟೊಗಳನ್ನು ಅವರು ಟ್ವೀಟ್‌ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಹಲವು ಟ್ವೀಟಿಗರು, ಮಲಗಿರುವ ವ್ಯಕ್ತಿ ತನ್ನ ಫೋಟೋ ತಾನೇ ತೆಗೆದುಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. 

ಮಲಗಿರುವ ವ್ಯಕ್ತಿಯ ಫೋಟೊಗಳನ್ನು ತೆಗೆದು, ನಂತರ ಫೇಸ್‌ಬುಕ್‌ನಲ್ಲಿ ತಾನೇ ಫೋಟೊಗಳನ್ನು ಅಪ್ಲೋಡ್‌ ಮಾಡುವ ಫೋನ್‌ ನಿಜಕ್ಕೂ ಅದ್ಭುತ. ನನಗೂ ಇಂಥ ಫೋನ್‌ನ ಅಗತ್ಯವಿದೆ ಎಂದೆಲ್ಲಾ ಜನ ವ್ಯಂಗ್ಯವಾಡಿದ್ದಾರೆ.

 

I slept at a relief camp last night in Changanacherry. Most people didn’t sleep thinking of a uncertain tomo pic.twitter.com/xQgnYjfZx5

— Alphons KJ (@alphonstourism)
click me!