ಹುತಾತ್ಮ ಯೋಧನ ಪಾರ್ಥಿವ ಶರೀರದ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಕೇಂದ್ರ ಸಚಿವ

By Web DeskFirst Published Feb 17, 2019, 10:31 PM IST
Highlights

ಕೆಲ  ಗಣ್ಯವ್ಯಕ್ತಿಗಳು ಅಂತ ಕರೆಯಿಸಿಕೊಳ್ಳುವರು ಯಾವ ಸಂದರ್ಭದಲ್ಲಿ ಹೇಗೆ ಇರಬೇಕು? ಹೇಗೆ ನಡೆದುಕೊಳ್ಳಬೇಕು ಅನ್ನೋ ಪರಿಜ್ಞಾನವೇ ಇಲ್ಲ. ಹುತಾತ್ಮ ಯೋಧನ ಅಂತಿಮ ಯಾತ್ರೆಯಲ್ಲಿ ಬಿಜೆಪಿ ಸಂಸದ ನಕ್ಕು, ನೆರದಿದ್ದ ಜನರತ್ತ ಕೈಬೀಸಿ ವಿವಾದಕ್ಕೊಳಗಾಗಿದ್ದಾರೆ. ಈಗ ಕೇಂದ್ರ ಸಚಿವನ ಸರದಿ.

ತಿರುವನಂತಪುರಂ, [ಫೆ.14]: ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಫೆ.14ರಂದು ಉಗ್ರರ ರಣಹೇಡಿ ಕೃತ್ಯಕ್ಕೆ 40ಕ್ಕೂ ಹೆಚ್ಚು CRPFಯೋಧರು ಹುತಾತ್ಮರಾಗಿದ್ದಾರೆ.

 ಉಗ್ರರ ಪೈಶಾಚಿಕ ಕೃತ್ಯಕ್ಕೆ ಇಡೀ ದೇಶವೇ ಖಂಡನೆ ವ್ಯಕ್ತಪಡಿಸಿದೆ. ಉಗ್ರರ ಕೃತ್ಯವನ್ನು ಖಂಡಿಸಿ, ಪಾಕಿಸ್ತಾನದ ವಿರುದ್ಧ ಪ್ರತಿಭಟನೆಯ ಕೂಗು ಕೇಳಿ ಬರುತ್ತಿವೆ. 

ಇದು ರೋಡ್‌ಶೋ ಅಲ್ಲ, ಹುತಾತ್ಮ ಯೋಧನ ಅಂತಿಮ ಯಾತ್ರೆ, BJP MPಗೆ ಸಕತ್ ತಿವಿತ

ಆದರೆ, ಪುಲ್ವಾಮ ಘಟನೆಯಲ್ಲಿ ಹುತಾತ್ಮರಾದ ಯೋಧರೊಬ್ಬರ ಪಾರ್ಥಿವ ಶರೀರದ ಮುಂದೆ ಕೇಂದ್ರ ಸಚಿವರೊಬ್ಬರು ಸೆಲ್ಫಿ ತೆಗೆದುಕೊಂಡು ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ.

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿದ್ದ ಕೇರಳದ ವಯ್ನಾಡ್​​ ಜಿಲ್ಲೆಯ ಲಕ್ಕಿದಿ ಯೋಧ ವಸಂತ್​ಕುಮಾರ್​​ ವಿ.ವಿ. ಅಂತಿಮ ದರ್ಶನ ಪಡೆಯಲು ಆಗಮಿಸಿದ್ದ ಸಚಿವ ಅಲ್ಫಾನ್ಸೋ ಕಣ್ಣನ್​ಥಾನಮ್ ಪಾರ್ಥಿವ ಶರೀರದ ಮುಂದೆ ಸೆಲ್ಫಿ ತೆಗೆದುಕೊಂಡಿದ್ದಾರೆ. 

 ಸಚಿವರ ಈ ವರ್ತನೆಯನ್ನು ಖಂಡಿಸಿ ಸಾಮಾಜಿಕ ತಾಣಗಳಲ್ಲಿ ಈ ಫೋಟೋ ಟ್ರೋಲ್​ ಆಗುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

click me!