ನಾ ಹಿಂದೂ. ನಾ ಮುಸಲ್ಮಾನ್: ಓನ್ಲಿ ಹಿಂದೂಸ್ತಾನ್!

Published : Jul 29, 2018, 04:00 PM ISTUpdated : Jul 30, 2018, 12:16 PM IST
ನಾ ಹಿಂದೂ. ನಾ ಮುಸಲ್ಮಾನ್: ಓನ್ಲಿ ಹಿಂದೂಸ್ತಾನ್!

ಸಾರಾಂಶ

ಭಾರತ ಧಾರ್ಮಿಕ ಅಲ್ಪ ಸಂಖ್ಯಾತರ ಸ್ವರ್ಗ ಅಲ್ಪಸಂಖ್ಯಾತರ ಸುರಕ್ಷಿತ ದೇಶ ಭಾರತ ಹಿಂದೂ ಅಮೆರಿಕನ್ ಫೌಂಡೇಶನ್ ವರದಿ   ಶಾಂತಿ, ಸಹಬಾಳ್ವೆಯೇ ಭಾರತದ ಹಿರಿಮೆ ಭಾರತದಲ್ಲಿ ಎಲ್ಲರಿಗೂ ಸಮಾನ ಅವಕಾಶ

ವಾಷಿಂಗ್ಟನ್(ಜು.29): ತನ್ನ ಧಾರ್ಮಿಕ ಅಲ್ಪಸಂಖ್ಯಾತ ಜನಸಂಖ್ಯೆಗೆ ಭಾರತ ಸರ್ಕಾರ ಸಾಕಷ್ಟು ಭದ್ರತೆ ನೀಡುತ್ತಿದ್ದು, ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಭಾರತ ದೇಶದ ಸ್ಥಿರತೆ ಬಲವಾಗಿದೆ ಎಂದು ವರದಿಯೊಂದು ಹೇಳಿದೆ. ಅಮೆರಿಕ ಮೂಲದ ಹಿಂದೂ ಅಮೆರಿಕನ್ ಫೌಂಡೇಷನ್ ಈ ವರದಿ ನೀಡಿದ್ದು, ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಭಾರತದಷ್ಟು ಸುರಕ್ಷಿತ ದೇಶ ಮತ್ತೊಂದಿಲ್ಲ ಎಂದು ಉಲ್ಲೇಖಿಸಿದೆ.

ಜಾಗತಿಕ ಮಟ್ಟದ ನಾಲ್ಕು ಧರ್ಮಗಳ ಜನ್ಮ ಸ್ಥಳವಾದ ಭಾರತ ಶತಮಾನಗಳ ಕಾಲ ಸಾಕಷ್ಟು ಧಾರ್ಮಿಕ, ಭಾಷಾ ಸಹಿಷ್ಣುತೆ ಬೆಳೆಸಿಕೊಂಡು ಬಂದಿದೆ. ಅಲ್ಲದೆ  ಹಿಂಸಾಚಾರದಿಂದ ತಪ್ಪಿಸಿಕೊಂಡು ಬಂದವರಿಗೆ ಆಶ್ರಯವನ್ನೂ ನೀಡುತ್ತಾ ಬರುವ ಮೂಲಕ ಆದರಣನೀಯ ರಾಷ್ಟ್ರವಾಗಿದೆ. ಸರ್ಕಾರ, ಮಿಲಿಟರಿ, ನ್ಯಾಯಾಂಗದ ಎಲ್ಲ ಸ್ಥರದಲ್ಲೂ ಯಾವುದೇ ತಾರತಮ್ಯವಿಲ್ಲದೇ ಅಲ್ಪಸಂಖ್ಯಾತರಿಗೂ ಭಾರತ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ವರದಿ ತಿಳಿಸಿದೆ.

ಮುಸ್ಲಿಮರು ಹಾಗು ಕ್ರಿಶ್ಚಿಯನ್ನರಿಗೆ ತಮ್ಮದೇ ಧರ್ಮಕ್ಕನುಗುಣವಾದ ಕಾನೂನಿಗೂ ಅವಕಾಶ ಮಾಡಿಕೊಟ್ಟಿದ್ದು, ಭಾರತ ಇಡೀ ಜಗತ್ತೇ ವಿಸ್ಮಯವಾಗಿ ನೋಡುವ ರೀತಿಯಲ್ಲಿ ತನ್ನ ಅಲ್ಪಸಂಖ್ಯಾತರನ್ನು ನೋಡಿಕೊಳ್ಳುತ್ತಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಆಗಾಗ ಸಂಭವಿಸಿರುವ ಧಾರ್ಮಿಕ ಗಲಭೆಗಳಿಗೆ ರಾಜಕೀಯ, ಐತಿಹಾಸಿಕ ಹಾಗೂ ಧಾರ್ಮಿಕ ಕಾರಣಗಳಿದ್ದರೂ, ಇತ್ತೀಚಿನ ದಿನಗಳಲ್ಲಿ ಇವೆಲ್ಲಾ ಸಾಕಷ್ಟು ಕಡಿಮೆಯಾಗಿವೆ. ಎಂದು ವರದಿಯಲ್ಲಿ ಅಭಿಪ್ರಾಯ ಪಡಲಾಗಿದೆ. ಮೂಲಭೂತ ಇಸ್ಲಾಮಿಕ್ ಭಯೋತ್ಪಾದನೆ, ನಕ್ಸಲ್‌ ಭಯೋತ್ಪಾದನೆಯನ್ನು ದಮನ ಮಾಡಿ ಇನ್ನಷ್ಟು ಸ್ಥಿರತೆ ತರುವ ನಿಟ್ಟಿನಲ್ಲಿ ಭಾರತಕ್ಕೆ ಮುಂದಿನ ದಿನಗಳಲ್ಲಿ ಅಮೆರಿಕ ಇನ್ನಷ್ಟು ಬೆಂಬಲ ನೀಡಬೇಕಿದೆ ಎಂದು ಪ್ರತಿಷ್ಠಾನ ಪ್ರತಿಪಾದಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂಗಳೂರಿನಲ್ಲಿ ರಿಷಬ್ ಶೆಟ್ಟಿ ಹರಕೆ ನೇಮ ವಿವಾದ, ತಮ್ಮಣ್ಣ ಶೆಟ್ಟಿ ಎತ್ತಿದ ಹಲವು ಪ್ರಶ್ನೆಗಳಿವು
ಬೆಂಗಳೂರಲ್ಲಿ ಚಿನ್ನದ ಬೆಲೆ 15,200 ರೂ ಇಳಿಕೆ, ಬಂಗಾರ ಖರೀದಿಗೆ ಇದು ಸೂಕ್ತ ಸಮಯವೇ?