
ನವದೆಹಲಿ(ಜ.31): ನಾಳೆ ಮಹಾ ಬಜೆಟ್ ಮಂಡನೆಯಾಗುತ್ತಿದೆ. ಈ ಬಜೆಟ್'ನ ಬಗ್ಗೆ ಜನರಲ್ಲಿ ನೂರಾರು ನಿರೀಕ್ಷೆಗಳಿವೆ. ಏಕೆಂದರೆ, ಇದು ನೋಟ್'ಬ್ಯಾನ್ ನಂತರ ಮಂಡನೆಯಾಗುತ್ತಿರುವ ಮೊತ್ತ ಮೊದಲ ಬಜೆಟ್. ಹಾಗಿದ್ದರೆ ಕೃಷಿ ಕ್ಷೇತ್ರದ ನಿರೀಕ್ಷೆಗಳು ಏನು? ಅನ್ನದಾತರ ಆತಂಕಗಳು ಏನು? ಇಲ್ಲಿದೆ ವಿವರ.
ಭಾರತದ ಆರ್ಥಿಕ ಬೆನ್ನೆಲುಬೇ ಕೃಷಿ. ಕೃಷಿಯನ್ನು ಹೊರತುಪಡಿಸಿ ದೇಶ ಇಲ್ಲ. ಆದರೆ, ಇಡೀ ದೇಶದಲ್ಲಿ ಅತಿ ಹೆಚ್ಚು ತೊಂದರೆಯಲ್ಲಿರುವ, ಅತೀ ಹೆಚ್ಚು ಸಮಸ್ಯೆ ಎದುರಿಸುತ್ತಿರುವ ಕ್ಷೇತ್ರ ಏನಾದರೂ ಇದೆ ಎಂದಾದರೆ, ಅದು ಕೃಷಿ ಕ್ಷೇತ್ರ. ಭಾರತದಲ್ಲಿ ಪ್ರತಿ ವರ್ಷ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಲೇ ಇದೆ. ಈ ಸಾವಿಗೆ, ಆತ್ಮಹತ್ಯೆಗೆ ಮೂಲ ಕಾರಣ. ಸಾಲ ಮತ್ತು ರೈತರ ಬೆಳೆಗೆ ಸೂಕ್ತ ಬೆಲೆ ಸಿಕ್ಕದೇ ಇರುವುದು ಮಾತ್ರ, ಹೀಗಾಗಿಯೇ ಕೃಷಿ ಕ್ಷೇತ್ರದ ಆತಂಕ ಪ್ರತಿ ವರ್ಷ ಹೆಚ್ಚುತ್ತಲೇ ಇದೆ.
-ವರ್ಷದಿಂದ ವರ್ಷಕ್ಕೆ ಕೃಷಿ ಭೂಮಿಯ ಪ್ರಮಾಣ ಕುಸಿಯುತ್ತಿದೆ
-ಕೃಷಿಕರು ಕೃಷಿಯಿಂದ ವಿಮುಖರಾಗುತ್ತಲೇ ಇದ್ದಾರೆ
-ಕೃಷಿ ಕ್ಷೇತ್ರದ ಕೊಡುಗೆಗೆ ತಕ್ಕಂತೆ, ಸೌಲಭ್ಯಗಳನ್ನು ಒದಗಿಸಿಲ್ಲ
-ಅತಿ ದೊಡ್ಡ ಕ್ಷೇತ್ರವಾದರೂ, ಅತ್ಯಂತ ನಿರ್ಲಕ್ಷ್ಯಕ್ಕೊಳಗಾಗಿರುವ ಕ್ಷೇತ್ರ
-ಕೃಷಿಕರು ಫಸಲಿಗೆ ಸೂಕ್ತ ಬೆಲೆ ದೊರಕಿಸುವ ವ್ಯವಸ್ಥೆಯೇ ಇಲ್ಲ
ರೈತರ ಆತ್ಮಹತ್ಯೆ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ
ಇಂಥಹ ಸಮಸ್ಯೆಗಳಿಂದಾಗಿ ಜಗತ್ತಿನಲ್ಲಿ ಅತಿ ದೊಡ್ಡ ಕೃಷಿ ಆಧಾರಿತ ರಾಷ್ಟ್ರವಾಗಿದ್ದರೂ, ಭಾರತ ಬೇಳೆ ಕಾಳು, ಎಣ್ಣೆ ಇತ್ಯಾದಿಗೆ ಬೇರೆ ದೇಶಗಳನ್ನು ಅವಲಂಬಿಸಿದೆ. ರೈತರ ಯಾವುದೇ ಬೆಳೆಗಳಿಗೆ ಇಷ್ಟೇ ಬೆಲೆ ಎನ್ನುವುದು ಇಲ್ಲವೇ ಇಲ್ಲ.
-ಬ್ಯಾಂಕುಗಳಲ್ಲಿ ಸೂಕ್ತ ಸಾಲ ಸಿಗುತ್ತಿಲ್ಲ
-ಕೂಲಿ ಕಾರ್ಮಿಕರ ಕೊರತೆ
-ಮಾರುಕಟ್ಟೆಯ ಕೊರತೆ
ಇಷ್ಟು ಸಮಸ್ಯೆಗಳು ತೀರಿಬಿಟ್ಟರೆ, ರೈತರ ಬದುಕು ಹಸನಾದೀತು. ಆದರೆ, ರೈತರ ಸಮಸ್ಯೆ ನಿವಾರಣೆಗೆ ಇಷ್ಟು ವರ್ಷಗಳಲ್ಲಿ ಒಂದು ವ್ಯವಸ್ಥೆಯೇ ಸಿದ್ಧವಾಗಿಲ್ಲ ಎನ್ನುವುದೇ ದೊಡ್ಡ ಸಮಸ್ಯೆ. ಆ ವ್ಯವಸ್ಥೆಯನ್ನು ರೂಪಿಸುವ ಯೋಜನೆ ಏನಾದರೂ ಜಾರಿಗೆ ಬಂದರೆ, ರೈತರ ಬದುಕು ಹಸನಾದೀತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.