ಟ್ರಂಪ್ ನೀತಿಯಿಂದ ಭಾರತೀಯ ಟೆಕ್ಕಿಗಳು, ವಿದ್ಯಾರ್ಥಿಗಳಿಗೆ ಅಪಾಯ

Published : Jan 30, 2017, 07:12 PM ISTUpdated : Apr 11, 2018, 12:35 PM IST
ಟ್ರಂಪ್ ನೀತಿಯಿಂದ ಭಾರತೀಯ ಟೆಕ್ಕಿಗಳು, ವಿದ್ಯಾರ್ಥಿಗಳಿಗೆ ಅಪಾಯ

ಸಾರಾಂಶ

ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ಎಚ್‌1ಬಿ ವೀಸಾ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಪೈಕಿ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶೇ.90 ಭಾರತೀಯರು ಎಚ್‌1ಬಿ ವೀಸಾ ಅಡಿಯಲ್ಲೇ ಇದ್ದಾರೆ. ಈ ವೀಸಾ ಹೊಂದಿರುವವರ ಸಂಗಾತಿಗಳು (ಪತಿ ಅಥವಾ ಪತ್ನಿ) ಕೂಡ ಅಮೆರಿಕದಲ್ಲಿ ನೌಕರಿ ಮಾಡಬಹುದು ಎಂಬ ನೀತಿಯನ್ನು ಒಬಾಮಾ ಆಡಳಿತ ಜಾರಿಗೆ ತಂದಿತ್ತು.

ನವದೆಹಲಿ(ಜ.31): ವಲಸಿಗರು ಮತ್ತು ವಿದೇಶದಿಂದ ಬಂದು ನೌಕರಿ ಮಾಡುತ್ತಿರುವ ಅಮೆರಿಕೇತರರ ಮೇಲೆ ಗದಾಪ್ರಹಾರ ನಡೆಸಲು ಉದ್ದೇಶಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳು, ಅಮೆರಿಕದಲ್ಲಿನ ಭಾರತೀಯ ವಿದ್ಯಾರ್ಥಿಗಳು, ನೌಕರರು ಮತ್ತು ಅವರ ಸಂಗಾತಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅಪಾಯವಿದೆ.

ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ಎಚ್‌1ಬಿ ವೀಸಾ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಪೈಕಿ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶೇ.90 ಭಾರತೀಯರು ಎಚ್‌1ಬಿ ವೀಸಾ ಅಡಿಯಲ್ಲೇ ಇದ್ದಾರೆ. ಈ ವೀಸಾ ಹೊಂದಿರುವವರ ಸಂಗಾತಿಗಳು (ಪತಿ ಅಥವಾ ಪತ್ನಿ) ಕೂಡ ಅಮೆರಿಕದಲ್ಲಿ ನೌಕರಿ ಮಾಡಬಹುದು ಎಂಬ ನೀತಿಯನ್ನು ಒಬಾಮಾ ಆಡಳಿತ ಜಾರಿಗೆ ತಂದಿತ್ತು. ಈ ಅವಕಾಶವನ್ನು ಟ್ರಂಪ್ ಆಡಳಿತ ರದ್ದು ಮಾಡಲು ಹೊರಟಿದೆ ಎಂಬ ಅಂಶವು ಶ್ವೇತಭವನದ ಪರಿಶೀಲನೆಯಲ್ಲಿರುವ 4 ಕಾರ್ಯಾಂಗ ಆದೇಶಗಳ ಕರಡು ಪ್ರತಿಗಳಲ್ಲಿದೆ ಎಂಬುದು ಮಾಧ್ಯಮಗಳಿಗೆ ಸೋರಿಕೆಯಾಗಿದೆ.

165,918 ವಿದ್ಯಾರ್ಥಿಗಳಿಗೂ ತೊಂದರೆ:

ಅಮೆರಿಕದಲ್ಲಿ ಕಲಿಯುತ್ತಿರುವ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ವಿದ್ಯಾರ್ಥಿಗಳಿಗೆ ಆಪ್ಟಿಕಲ್ ಪ್ರಾಕ್ಟಿಕಲ್ ಟ್ರೇನಿಂಗ್ (ಒಪಿಟಿ) ಕೋರ್ಸ್ ಮುಗಿದ ಬಳಿಕ ಈಗ 3 ವರ್ಷ ವಿಸ್ತರಿತ ಅವಧಿಯ ವೀಸಾ ಪಡೆಯಲು ಅವಕಾಶವಿದೆ. ಆದರೆ ಟ್ರಂಪ್ ಆಡಳಿತ ವಿಸ್ತರಿತ ವೀಸಾಗೆ ಕಡಿವಾಣ ಹಾಕಲು ನಿರ್ಧರಿಸಿದ್ದು, 165,918 ಭಾರತೀಯ ವಿದ್ಯಾರ್ಥಿಗಳಿಗೆ ತೊಂದರೆ ಆಗುವ ಭೀತಿ ಎದುರಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ