ಒಂದೇ ವೇದಿಕೆಯಲ್ಲಿ ಭಾರತ, ಪಾಕ್ ಪ್ರಧಾನಿ!

By Web Desk  |  First Published Sep 9, 2019, 5:33 PM IST

ಸೆಪ್ಟೆಂಬರ್ 27ರಂದು ಮುಖಾಮುಖಿಯಾಗ್ತಾರೆ ಪ್ರಧಾನಿ ಮೋದಿ, ಇಮ್ರಾನ್ ಖಾನ್!| ವಿಶ್ವದೆದುರು ಭಾರತ ವರ್ಸಸ್ ಪಾಕ್| ಯಾವ ವಿಚಾರ ಪ್ರಸ್ತಾಪಿಸ್ತಾರೆ ಉಭಯ ರಾಷ್ಟ್ರದ ಪ್ರಧಾನಿಗಳು?


ನವದೆಹಲಿ[ಸೆ.09]: ಸುಮಾರು ಒಂದು ವರ್ಷದ ಹಿಂದೆ ಪಾಕಿಸ್ತಾನದ ರಾಜಕೀಯ ಅಲೆ ಬದಲಾಗಿತ್ತು. ಇಮ್ರಾನ್ ಖಾನ್ ನೇತೃತ್ವದ ತಹರೀಕ್ ಎ ಪಾಕಿಸ್ತಾನ್ ಪಕ್ಷ ಪಿಪಿಪಿ ಹಾಗೂ ಪಿಎಮ್ ಎಲ್- ಎನ್ ಪಕ್ಷವನ್ನು ಬದಿಗೊತ್ತಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿತ್ತು. 

ಆಡಳಿತ ಚುಕ್ಕಾಣಿ ಹಿಡಿದಿದ್ದ ಇಮ್ರಾನ್ ಖಾನ್ ಆರಂಭದಲ್ಲಿ ಪ್ರಧಾನಿ ಮೋದಿಯ ನವ ಭಾರತ ಕಲ್ಪನೆಯಿಂದ ಪ್ರೇರಣೆಯಿಂದ, ನ್ಯೂ ಪಾಕಿಸ್ತಾನ ನಿರ್ಮಿಸುವ ಘೋಷಣೆ ಮಾಡಿದ್ದರು. ಆದರೆ ಪುಲ್ವಾಮಾ ದಾಳಿಯಿಂದ ಪಾಕಿಸ್ತಾನ ಬದಲಾಗಿಲ್ಲ ಎಂಬುವುದು ಮತ್ತೆ ಬಹಿರಂಗವಾಗಿತ್ತು. 

Tap to resize

Latest Videos

undefined

ಪುಲ್ವಾಮಾ ದಾಳಿ, ಮಸೂದ್ ಅಜರ್, ಹಫೀಜ್ ಸಯೀದ್ ಈ ಎಲ್ಲಾ ವಿಚಾರಗಳಲ್ಲಿ ಇಮ್ರಾನ್ ಖಾನ್ ಪಾಕಿಸ್ತಾನದ ಸೈನ್ಯಾಧಿಕಾರಿ ಬಾಜ್ವಾ ಹೇಳಿದಂತೆ ಕುಣಿಯಲಾರಂಭಿಸಿದ್ದರು. ಇತ್ತೀಚೆಗಷ್ಟೇ ಭಾರತ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ್ದು, ಸರ್ಕಾರದ ಈ ನಿರ್ಧಾರ ಇಮ್ರಾನ್ ಖಾನ್ ನಿದ್ದೆಗೆಡಿಸಿತ್ತು. ಪಾಕ್ ಈ ವಿಚಾರವಾಗಿ ವಿಶ್ವಸಂಸ್ಥೆ ಮೆಟ್ಟಿಲೇರಿತ್ತು. ಈ ವೇಳೆ ಚೀನಾ ಮಾತ್ರ ಪಾಕಿಸ್ತಾನದ ಬೆಂಬಲಕ್ಕೆ ನಿಂತಿತ್ತು. ಆದರೆ ಭಾರತ ಜಮ್ಮು ಕಾಶ್ಮೀರ ವಿಚಾರವಾಗಿ ಬೇರಾವುದೇ ರಾಷ್ಟ್ರಗಳ ಮಧ್ಯಸ್ಥಿಕೆ ಸಹಿಸುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿತ್ತು. ಈ ಮೂಲಕ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿತ್ತು.

ಆದರೀಗ ಸೆಪ್ಟೆಂರ್ 27ರಂದು ಮತ್ತೆ ಪ್ರಧಾನಿ ಮೋದಿ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಲಿದ್ದಾರೆ. UNGA[ವಿಶ್ವಸಂಸ್ಥೆಯ ಸಾಮಾನ್ಯ ಸಭೆ] ನಲ್ಲಿ ಪ್ರಧಾನಿ ಮೋದಿ ವಿಶ್ವವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮೋದಿ ಮಾತಿನ ಬಳಿಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡಾ ಭಾಷಣ ಮಾಡಲಿದ್ದಾರೆ. ಈ ಸಭೆಯಲ್ಲಿ ಎಲ್ಲಾ ರಾಷ್ಟ್ರಗಳು ತಮ್ಮ ಮುಂದಿನ ಗುರಿಯನ್ನು ಉಲ್ಲೇಖಿಸುತ್ತಾರೆ. ಹೀಗಿರುವಾಗ ಮೋದಿ ಹಾಗೂ ಇಮ್ರಾನ್ ಖಾನ್ ಈ ಸಭೆಯಲ್ಲಿ ಯಾವ ವಿಚಾರ ಪ್ರಸ್ತಾಪಿಸುತ್ತಾರೆ ಎಂಬುವುದು ಕುತೂಹಲ ಮೂಡಿಸಿದೆ. 

click me!