
ಬೆಂಗಳೂರು(ಸೆ. 21): ಸುಪ್ರೀಂಕೋರ್ಟ್'ನಲ್ಲಿ ಕರ್ನಾಟಕಕ್ಕೆ ವಿರುದ್ಧವಾದ ತೀರ್ಪು ಹೊರಬಿದ್ದಿದೆ. ಆದೇಶವೇನೋ ಹೊರಬಂದಿದೆ. ಆದ್ರೆ ಕೆಲವೊಂದು ಪ್ರಶ್ನೆಗಳಿಗೆ ಇನ್ನೂ ಉತ್ತರ ದೊರಕಿಲ್ಲ. ಅಂತಹ ಉತ್ತರವಿಲ್ಲದ ಪ್ರಶ್ನೆಗಳು ಈ ಕೆಳಕಂಡಂತಿವೆ.
ಉತ್ತರ ಸಿಗದ ಪ್ರಶ್ನೆಗಳು ?
1) ಮಳೆ ಅಭಾವ, ನೀರಿನ ಸಂಗ್ರಹದ ಬಗ್ಗೆ ಕರ್ನಾಟಕ ಮುಂದಿಟ್ಟ ಅಂಕಿ-ಅಂಶ, ವಾಸ್ತವ ಸಂಗತಿಗಳನ್ನು ಗಣನೆಗೆ ತೆಗೆದುಕೊಳ್ಳದಿದ್ದದ್ದು ಏಕೆ?
2) ಕಾವೇರಿ ಮೇಲುಸ್ತುವಾರಿ ಸಮಿತಿ, ತಮಿಳುನಾಡಿಗೆ ನೀರು ಬಿಡಲು ಆದೇಶಿಸಿದ ಮೇಲೂ ಮತ್ತೆ ನೀರು ಬಿಡುವ ತೀರ್ಮಾನ ಕೈಗೊಂಡಿದ್ದೇಕೆ?
3) ನೀರು ಬಿಡುಗಡೆ ಕೋರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಕಾವೇರಿ ನ್ಯಾಯಮಂಡಳಿ ರಚನೆಯ ಆದೇಶ ಹೊರಡಿಸಿದ್ದರ ಔಚಿತ್ಯವೇನು?
4) ತನ್ನದೇ ಆದೇಶದಂತೆ ರಚಿತವಾಗಿದ್ದ ಕಾವೇರಿ ಮೇಲುಸ್ತುವಾರಿ ಸಮಿತಿ ನೀಡಿದ್ದ ಆದೇಶವನ್ನು ಗಣನೆಗೆ ತೆಗೆದುಕೊಳ್ಳದೇ ಏಕಾಏಕಿ ನ್ಯಾಯಮಂಡಳಿ ರಚನೆಗೆ ಆದೇಶಿಸಿದ್ದೇಕೆ
5) ತಮಿಳುನಾಡಿನ ಮೆಟ್ಟೂರು ಡ್ಯಾಂನಲ್ಲಿ 50 ಟಿಎಂಸಿ ನೀರು ಇದೆ; ಇತ್ತ ಕರ್ನಾಟಕದ 4 ಜಲಾಶಯಗಳು ಸೇರಿ ಕೇವಲ 27 ಟಿಎಂಸಿ ನೀರು ಇದೆ. ಆದರೂ ದಿನಕ್ಕೆ 6 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶಿಸಿದ್ದಕ್ಕೆ ಕಾರಣ ಏನು?
6) ಸಂಕಷ್ಟ ಸೂತ್ರದ ಅನ್ವಯ ರಾಜ್ಯಗಳ ನಡುವೆ ನೀರು ಹಂಚಿಕೆ ಬಗ್ಗೆ ಕಾವೇರಿ ನ್ಯಾಯಾಧೀಕರಣ ಇನ್ನೂ ಯಾವುದೇ ಸ್ಪಷ್ಟ ಆದೇಶ ನೀಡಿಲ್ಲದಿದ್ದರೂ, ನೀರು ಹರಿಸಲು ಆದೇಶಿಸಿದ್ದರ ಔಚಿತ್ಯವೇನು?
7) ನ್ಯಾಯಾಧೀಕರಣದ ಅಂತಿಮ ತೀರ್ಪಿನಲ್ಲಿ ಸಂಕಷ್ಟ ಸೂತ್ರದ ಬಗ್ಗೆ ಸ್ಪಷ್ಟತೆ ಇಲ್ಲ, ಆದ್ರೂ ಕಾವೇರಿ ನ್ಯಾಯಮಂಡಳಿ ರಚನೆಯ ಅಗತ್ಯವೇನು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.