7 ರೋಹಿಂಗ್ಯಾ ಮುಸ್ಲಿಮರ ಮ್ಯಾನ್ಮಾರ್‌ಗೆ ಗಡೀಪಾರು: ವಿಶ್ವಸಂಸ್ಥೆ ತರಾಟೆ

By Web DeskFirst Published Oct 6, 2018, 11:21 AM IST
Highlights

ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಅಲ್ಪಸಂಖ್ಯಾತರ ಜನಾಂಗೀಯ ಹತ್ಯೆಯಲ್ಲಿ ಅಲ್ಲಿನ ಸೇನೆಯೇ ಸಕ್ರಿಯವಾಗಿದೆ ಎಂಬ ಆರೋಪವಿದೆ. ಈ ಬಗ್ಗೆ ತನ್ನ ಎಚ್ಚರಿಕೆಯನ್ನೂ ನಿರ್ಲಕ್ಷಿಸಿ, ರೋಹಿಂಗ್ಯಾ ವಲಸಿಗರನ್ನು ಗಡೀಪಾರು ಮಾಡಲಾಗಿದೆ ಎಂದು ಭಾರತಕ್ಕೆ ವಿಶ್ವಸಂಸ್ಥೆ ತರಾಟೆಗೆ ತೆಗೆದುಕೊಂಡಿದೆ. 

ಜಿನೆವಾ: ಅಸ್ಸಾಂನಲ್ಲಿ ಅಕ್ರಮವಾಗಿ ನೆಲೆಸಿದ್ದ 7 ಮಂದಿ ರೋಹಿಂಗ್ಯಾ ವಲಸಿಗರನ್ನು ಮ್ಯಾನ್ಮಾರ್‌ಗೆ ಗಡೀಪಾರು ಮಾಡಿದ ಭಾರತದ ಕ್ರಮಕ್ಕೆ ವಿಶ್ವಸಂಸ್ಥೆ ಅಸಮಾಧಾನ ವ್ಯಕ್ತಪಡಿಸಿದೆ.

ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಅಲ್ಪಸಂಖ್ಯಾತರ ಜನಾಂಗೀಯ ಹತ್ಯೆಯಲ್ಲಿ ಅಲ್ಲಿನ ಸೇನೆಯೇ ಸಕ್ರಿಯವಾಗಿದೆ ಎಂಬ ಆರೋಪವಿದೆ.

ಈ ಬಗ್ಗೆ ತನ್ನ ಎಚ್ಚರಿಕೆಯನ್ನೂ ನಿರ್ಲಕ್ಷಿಸಿ, ರೋಹಿಂಗ್ಯಾ ವಲಸಿಗರನ್ನು ಗಡೀಪಾರು ಮಾಡಲಾಗಿದೆ. ಗಡೀಪಾರು ಆಗಿರುವ 7 ಮಂದಿ ರೋಹಿಂಗ್ಯಾ ಮುಸ್ಲಿಮರ ಸುರಕ್ಷತೆ ಬಗ್ಗೆ ಆತಂಕವಾಗಿದೆ,’ ಎಂದು ವಿಶ್ವಸಂಸ್ಥೆ ಹೇಳಿದೆ. ಬೌದ್ಧ ಧರ್ಮೀಯರೇ ಹೆಚ್ಚಾಗಿರುವ ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ಮ್ಯಾನ್ಮಾರ್‌ ನಾಗರಿಕರೆಂದೇ ಪರಿಗಣಿಸುವುದಿಲ್ಲ. ಬದಲಿಗೆ ಅವರನ್ನು ಅಕ್ರಮ ಬೆಂಗಾಳಿಗಳು ಎಂದು ಗುರುತಿಸುತ್ತಾರೆ. ಇದೇ ಕಾರಣಕ್ಕಾಗಿ ಬೌದ್ಧ ಧರ್ಮೀಯರು ರೋಹಿಂಗ್ಯಾ ಮುಸ್ಲಿಮರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ ಎಂಬುದು ಆರೋಪ.

click me!