ಕಾಣೆಯಾದವರನ್ನು ಹುಡಕುವ ಸಂಸ್ಥೆ ಮುಖ್ಯಸ್ಥನೇ ನಾಪತ್ತೆ

By Web DeskFirst Published Oct 6, 2018, 8:00 AM IST
Highlights

ಫ್ರಾನ್ಸ್‌ನ ಲಿಯೋನ್‌ ನಗರದಲ್ಲಿ ತಮ್ಮ ಮಡದಿ ಹಾಗೂ ಮಕ್ಕಳ ಜತೆ ವಾಸವಾಗಿರುವ 64 ವರ್ಷದ ಮೆಂಗ್‌ ಅವರು ಸೆ.29ರಂದು ಚೀನಾ ಪ್ರವಾಸ ಕೈಗೊಂಡಿದ್ದರು. ಬಳಿಕ ಅವರ ಸುದ್ದಿಯೇ ಇಲ್ಲ. ಅವರನ್ನು ಸಂಪರ್ಕಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ ಎಂದು ಫ್ರೆಂಚ್‌ ಪೊಲೀಸರು ಹೇಳಿದ್ದಾರೆ 

ಪ್ಯಾರಿಸ್‌ :  ನಾಪತ್ತೆಯಾದ ಆರೋಪಿಗಳನ್ನು ಜಾಗತಿಕ ಮಟ್ಟದಲ್ಲಿ ಶೋಧಿಸಿ ಬಂಧಿಸಲು ನೆರವಾಗುವ ‘ಇಂಟರ್‌ಪೋಲ್‌’ ಸಂಸ್ಥೆಯ ಮುಖ್ಯಸ್ಥರೇ ನಾಪತ್ತೆಯಾಗಿರುವ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಫ್ರಾನ್ಸ್‌ ಪೊಲೀಸರು ಈಗ ತನಿಖೆ ಆರಂಭಿಸಿದ್ದಾರೆ.

ಚೀನಾ ಸರ್ಕಾರದಲ್ಲಿ ಮಂತ್ರಿಯಾಗಿರುವ ಮೆಂಗ್‌ ಹೊಂಗ್‌ವೈ ನಾಪತ್ತೆಯಾಗಿರುವ ಇಂಟರ್‌ಪೋಲ್‌ ಮುಖ್ಯಸ್ಥ. ಕಳೆದ ವಾರ ತವರು ದೇಶ ಚೀನಾ ಪ್ರವಾಸದಲ್ಲಿ ಇರುವಾಗ ಅವರು ನಾಪತ್ತೆಯಾದ ಬಗ್ಗೆ ವರದಿಯಾಗಿದೆ.

ಫ್ರಾನ್ಸ್‌ನ ಲಿಯೋನ್‌ ನಗರದಲ್ಲಿ ತಮ್ಮ ಮಡದಿ ಹಾಗೂ ಮಕ್ಕಳ ಜತೆ ವಾಸವಾಗಿರುವ 64 ವರ್ಷದ ಮೆಂಗ್‌ ಅವರು ಸೆ.29ರಂದು ಚೀನಾ ಪ್ರವಾಸ ಕೈಗೊಂಡಿದ್ದರು. ಬಳಿಕ ಅವರ ಸುದ್ದಿಯೇ ಇಲ್ಲ. ಅವರನ್ನು ಸಂಪರ್ಕಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ ಎಂದು ಫ್ರೆಂಚ್‌ ಪೊಲೀಸರು ಹೇಳಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಆದರೆ ಈ ಬಗ್ಗೆ ಇಂಟರ್‌ಪೋಲ್‌ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಮೆಂಗ್‌ ಅವರು 2016ರಲ್ಲಿ ಇಂಟರ್‌ಪೋಲ್‌ ಮುಖ್ಯಸ್ಥರಾಗಿ ನೇಮಕವಾಗಿದ್ದರು. 2020ರವರೆಗೂ ಅವರ ಅವಧಿ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ದೇಶಗಳ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ತನಿಖೆಗೆ ಸಮನ್ವಯ ಸಾಧಿಸುವುದು ಹಾಗೂ ವಿವಿಧ ದೇಶಗಳಲ್ಲಿ ಅಡಗಿರುವ ಆರೋಪಿಗಳನ್ನು ಪತ್ತೆ ಮಾಡಿ ಅವರ ಬಂಧನಕ್ಕೆ ನೆರವಾಗುವುದು ಇಂಟರ್‌ಪೋಲ್‌ ಕೆಲಸವಾಗಿದೆ.

ಈ ನಡುವೆ, ವಿವಿಧ ದೇಶಗಳಲ್ಲಿ ತನ್ನ ವಿರೋಧಿ ದನಿಯನ್ನು ಅಡಗಿಸಲು ಚೀನಾ ಈ ಪ್ರಕರಣವನ್ನು ದುರ್ಬಳಕೆ ಮಾಡಿಕೊಳ್ಳಬಹುದು ಎಂದು ಆ್ಯಮ್ನೆಸ್ಟಿಇಂಟರ್‌ನ್ಯಾಷನಲ್‌ ಭೀತಿ ವ್ಯಕ್ತಪಡಿಸಿದೆ.

click me!