ಸಿಗದ ಸಚಿವ ಸ್ಥಾನ : ಪಕ್ಷ ಬಿಡ್ತಾರಾ ಅತೃಪ್ತ ಶಾಸಕ ?

By Web DeskFirst Published Aug 26, 2019, 2:33 PM IST
Highlights

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಹಲವರಿಂದ ಅಸಮಾಧಾನ ವ್ಯಕ್ತವಾಗಿದೆ. ಹಲವು ಅತೃಪ್ತರು ಸೃಷ್ಟಿಯಾಗಿದ್ದು ಅದರಲ್ಲಿ ಉಮೇಶ್ ಕತ್ತಿ ಕೂಡ ಪಕ್ಷದ ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 

ಚಿಕ್ಕೋಡಿ [ಆ.26]: ಉಮೇಶ ಕತ್ತಿ ಅವರಿಗೆ ಮಂತ್ರಿಸ್ಥಾನದ ಅಪೇಕ್ಷೆ ಇತ್ತು. ಆದರೆ, ಅವರಿಗೆ ಸಿಕ್ಕಿಲ್ಲ ಎಂದು ಬೆದರಿಕೆಯ ಮಾತುಗಳನ್ನು ಆಡಿಲ್ಲ. ಅವರೊಬ್ಬ ಬಿಜೆಪಿಯ ಹಿರಿಯ ನಾಯಕರು, ಯಾವುದೇ ಕಾರಣಕ್ಕೂ ಪಕ್ಷ ಬಿಡುವ ನಿರ್ಣಯ ತೆಗೆದುಕೊಳ್ಳುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು. 

ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಹತ್ತಿರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲ ಶಾಸಕರು ಸಹೋದರಂತೆ ಇದ್ದೇವೆ. ಒಂದೇ ಕುಟುಂಬದ ತರಹ ಮುಂದುವರಿಯುತ್ತೇವೆ. ಅವರ ಬೇಡಿಕೆ ಸ್ಪಂದಿಸುವ ಕೆಲಸ ಪಕ್ಷದ ಹೈಕಮಾಂಡ್ ಮಾಡಲಿದೆ. ಮಾಧ್ಯಮದ ಊಹಾಪೋಹ ಇದೆ. ಮಾಧ್ಯಮದವರು ಅದನ್ನು ಬಿಟ್ಟರೆ ಸರ್ಕಾರ ಚೆನ್ನಾಗಿ ನಡೆಯುತ್ತದೆ.

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಡಿಸಿಸಿ ಬ್ಯಾಂಕ್ ರಾಜಕೀಯ ಉಮೇಶ ಕತ್ತಿ ಅವರಿಗೆ ಸಚಿವಸ್ಥಾನ ಕೈತಪ್ಪಲು ಕಾರಣವಾಯಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲೆಯಲ್ಲಿ ಆ ತರಹದ ಯಾವುದೇ ಬೆಳವಣಿಗೆ ನಡೆದಿಲ್ಲ ಇದು ಮಾಧ್ಯಮಗಳ ಊಹಾಪೋ ಹ ಎಂದು ಜಾರಿಕೊಂಡರು. ಕೇಂದ್ರ ತಂಡದೊಂದಿಗೆ ಜಿಲ್ಲೆಯ ನೂತನ ಸಚಿವರು ಏಕೆ ಬಂದಿಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನೆರೆಯ ಅಧ್ಯಯನ ತಂಡದೊಂದಿಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಈಗಾಗಲೇ ಪ್ರವಾಹ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ.

click me!