
ನವದೆಹಲಿ(ಅ.16): ಭಾರತದ ಆರ್ಥಿಕತೆಯ ಮೇಲೆ ಕಣ್ಣಿಟ್ಟಿರುವ ಬ್ರಿಟನ್ ನೂತನ ಪ್ರಧಾನಿ ಥೆರೇಸಾ ಮೇ, ಭಾರತ ಹಾಗೂ ಇಂಗ್ಲೆಂಡ್ ವಾಣಿಜ್ಯ-ವಹಿವಾಟು ಹೆಚ್ಚಿಸುವ ಸಲುವಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲು ನವೆಂಬರ್ 07 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ.
ಮೂರು ದಿನಗಳ ಮಟ್ಟಿಗೆ ಥೆರೇಸಾ ಮೇ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಥೆರೇಸಾ ಪಾಲಿಗೆ ಯೂರೋಪ್ ಹೊರತುಪಡಿಸಿ ಭಾರತಕ್ಕೆ ಮೊದಲ ದ್ವಿಪಕ್ಷೀಯ ಭೇಟಿ ಇದಾಗಲಿದೆ.
ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸಹಭಾಗಿತ್ವದ ಕುರಿತಂತೆ ಮಾತುಕತೆ ನಡೆಸಲಿದ್ದಾರೆ. ಇದಲ್ಲದೆ ಜಂಟಿ ಆರ್ಥಿಕ ಮತ್ತು ವಾಣಿಜ್ಯ ಸಮಿತಿ ಸಭೆ ನಡೆಯಲಿದೆ ಎಂದು ಸಚಿವಾಲಯ ತಿಳಸಿದೆ.
2015 ರಲ್ಲಿ ನರೇಂದ್ರ ಮೋದಿ ಇಂಗ್ಲೆಂಡ್'ಗೆ ಭೇಟಿ ನೀಡಿದ ವೇಳೆ ಜಂಟಿ ಸಭೆ ನಡೆಸುವ ಕುರಿತಂತೆ ಉಭಯ ದೇಶಗಳು ತೀರ್ಮಾಣಿಸಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.