
ನವದೆಹಲಿ: ಆಧಾರ್ ಸಂಖ್ಯೆಯನ್ನು ವಿತರಿಸುವ ವಿಶಿಷ್ಟಗುರುತು ಸಂಖ್ಯೆ ಪ್ರಾಧಿಕಾರವು ತಾನು ನಡೆಸುತ್ತಿದ್ದ ಆಧಾರ್ ಸೇವಾ ಕೇಂದ್ರಗಳ ಜತೆಗಿನ ಗುತ್ತಿಗೆಯನ್ನು ಮುಂದುವರಿಸದೇ ಇರಲು ತೀರ್ಮಾನಿಸಿದೆ. ಇದರಿಂದಾಗಿ ಈ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ 50 ಸಾವಿರ ಮಂದಿಯ ಕೆಲಸಕ್ಕೆ ಕುತ್ತು ಬರುವ ಭೀತಿ ಎದುರಾಗಿದೆ.
ಆಧಾರ್ ಕೇಂದ್ರಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಸ್ಥಾಪಿಸಲಾಗಿದೆ. ಪ್ರತಿ ಕೇಂದ್ರದಲ್ಲಿ ಸರಿಸುಮಾರು 3ರಿಂದ 4 ಮಂದಿ ಕೆಲಸ ಮಾಡುತ್ತಾರೆ. ದೇಶಾದ್ಯಂತ ಇಂತಹ ಸಾವಿರಾರು ಕೇಂದ್ರಗಳಿವೆ. ಇದರಲ್ಲಿ 12 ಸಾವಿರ ಕೇಂದ್ರಗಳು ಆಧಾರ್ ನೋಂದಣಿಯಲ್ಲಿ, 45 ಸಾವಿರ ಕೇಂದ್ರಗಳು ಆಧಾರ್ ವಿವರಗಳನ್ನು ಪರಿಷ್ಕರಣೆ ಮಾಡುವಲ್ಲಿ ನಿರತವಾಗಿವೆ. ಇನ್ನು 27 ಸಾವಿರ ಕೇಂದ್ರಗಳು ಆಧಾರ್ ಸಂಬಂಧಿತ ಇತರ ಕೆಲಸಗಳಲ್ಲಿ ತೊಡಗಿವೆ.
ಆದರೆ ಆಧಾರ್ ಸೇವಾ ಕೇಂದ್ರಗಳು ಸರ್ಕಾರಿ ಕಚೇರಿಗಳಲ್ಲೇ ಕೆಲಸ ಮಾಡಬೇಕು ಎಂದು ಇತ್ತೀಚೆಗೆ ಸರ್ಕಾರ ಘೋಷಿಸಿತ್ತು. ಇದರನ್ವಯ ಸುಮಾರು 12 ಸಾವಿರ ಕೇಂದ್ರಗಳು ಮಾತ್ರ ಸರ್ಕಾರಿ ಕಚೇರಿಗಳ ಆವರಣಕ್ಕೆ ಸ್ಥಳಾಂತರಗೊಳ್ಳಲಿವೆ. ಸರ್ಕಾರಿ ಸಿಬ್ಬಂದಿಗಳು ಕೂಡ ಆಧಾರ್ ಕೆಲಸಕ್ಕೆ ನಿಯೋಜನೆಗೊಳ್ಳಲಿದ್ದಾರೆ. ಇದರಿಂದ ಹಾಲಿ ಇರುವ ಆಧಾರ್ ಸೇವಾ ಕೇಂದ್ರಗಳ ಮೇಲಿನ ಕೆಲಸದ ಒತ್ತಡ ಕಡಿಮೆಯಾಗಲಿದೆ.
ಹೀಗಾಗಿ ಇನ್ನುಳಿದ ಸೇವಾ ಕೇಂದ್ರಗಳಲ್ಲಿನ ಸಿಬ್ಬಂದಿಗೆ ಕೆಲಸ ಬಿಡುವಂತೆ ಸೂಚನೆ ನೀಡಲಾಗುತ್ತಿದೆ. ಅನೇಕ ಸೇವಾ ಕೇಂದ್ರಗಳ ಲಾಗಿನ್ ಐಡಿಯನ್ನು ಪ್ರಾಧಿಕಾರ ನಿಷ್ಕಿ್ರಯಗೊಳಿಸಿದೆ. ಇದು ಸಿಬ್ಬಂದಿಗಳನ್ನು ಕಂಗಾಲು ಮಾಡಿದೆ.
ಹೊರಗುತ್ತಿಗೆ ಪಡೆದ ಅನೇಕ ಆಧಾರ್ ಸೇವಾ ಕೇಂದ್ರಗಳಲ್ಲಿನ ಸಿಬ್ಬಂದಿ ತಾವು ಸಾಲಸೋಲ ಮಾಡಿ ಕಂಪ್ಯೂಟರ್ ಖರೀದಿಸಿ ಕೇಂದ್ರಗಳನ್ನು ಹಾಕಿಕೊಂಡಿದ್ದರು. ಈಗ ಕೆಲಸ ಹೋಗಿದೆ. ಆದ್ದರಿಂದ ಮಾಡಿದ ಸಾಲ ಕಟ್ಟೋರಾರಯರು ಹಾಗೂ ತಮ್ಮ ಹೊಟ್ಟೆಹೊರೆಯೋದು ಹೇಗೆ ಎಂಬ ಚಿಂತೆ ಅವರಲ್ಲಿ ಆವರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.