ಮಿಲಿಟರಿಗೆ ವೆಚ್ಚ ಮಾಡುವಲ್ಲಿ ಭಾರತಕ್ಕೆ ವಿಶ್ವದಲ್ಲಿ 5ನೇ ಸ್ಥಾನ

By Suvarna Web DeskFirst Published Feb 16, 2018, 8:34 AM IST
Highlights

ನೆರೆಯ ಚೀನಾ ಮತ್ತು ಪಾಕಿಸ್ತಾನಗಳಿಂದ ಸದಾ ಯುದ್ಧ ಭೀತಿ ಎದುರಿಸುವ ಭಾರತ, ಅತಿ ಹೆಚ್ಚು ರಕ್ಷಣಾ ವೆಚ್ಚ ಮಾಡುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ 5ನೇ ಸ್ಥಾನಕ್ಕೆ ಏರಿದೆ. ಇದುವರೆಗೆ 5ನೇ ಸ್ಥಾನದಲ್ಲಿದ್ದ ಬ್ರಿಟನ್‌ ದೇಶವನ್ನು ಭಾರತ 6ನೇ ಸ್ಥಾನಕ್ಕೆ ತಳ್ಳಿದೆ.

ಲಂಡನ್‌: ನೆರೆಯ ಚೀನಾ ಮತ್ತು ಪಾಕಿಸ್ತಾನಗಳಿಂದ ಸದಾ ಯುದ್ಧ ಭೀತಿ ಎದುರಿಸುವ ಭಾರತ, ಅತಿ ಹೆಚ್ಚು ರಕ್ಷಣಾ ವೆಚ್ಚ ಮಾಡುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ 5ನೇ ಸ್ಥಾನಕ್ಕೆ ಏರಿದೆ. ಇದುವರೆಗೆ 5ನೇ ಸ್ಥಾನದಲ್ಲಿದ್ದ ಬ್ರಿಟನ್‌ ದೇಶವನ್ನು ಭಾರತ 6ನೇ ಸ್ಥಾನಕ್ಕೆ ತಳ್ಳಿದೆ.

ಬ್ರಿಟನ್‌ನ ‘ಇಂಟರ್‌ನ್ಯಾಷನಲ್‌ ಇನ್ಸಿಟಿಟ್ಯೂಟ್‌ ಫಾರ್‌ ಸ್ಟ್ರಾಟರ್ಜಿಕ್‌ ಸ್ಟಡೀಸ್‌’ ಬಿಡುಗಡೆ ಮಾಡಿರುವ ‘ಮಿಲಿಟರಿ ಸಮತೋಲನ 2018’ ವರದಿ ಅನ್ವಯ ಅಮೆರಿಕ, ಚೀನಾ, ಸೌದಿ ಅರೇಬಿಯಾ, ರಷ್ಯಾ ಮತ್ತು ಭಾರತ ದೇಶಗಳು ಕ್ರಮವಾಗಿ ಟಾಪ್‌ 5 ಸ್ಥಾನ ಪಡೆದುಕೊಂಡಿವೆ. ವರದಿ ಅನ್ವಯ 2017ರಲ್ಲಿ ಅಮೆರಿಕ 40 ಲಕ್ಷ ಕೋಟಿ ರು., ಚೀನಾ ಅಂದಾಜು 10 ಲಕ್ಷ ಕೋಟಿ ರು. ಸೌದಿ ಅರೇಬಿಯಾ 5 ಲಕ್ಷ ಕೋಟಿ ರು., ರಷ್ಯಾ 4 ಲಕ್ಷ ಕೋಟಿ ರು. ಮತ್ತು ಭಾರತ 3.41 ಲಕ್ಷ ಕೋಟಿ ರು. ಮಿಲಿಟರಿ ವೆಚ್ಚ ಮಾಡಿವೆ.

ತನ್ನ ಸೇನೆಯನ್ನು ಆಧುನೀಕರಣಗೊಳಿಸಲು ಭಾರತ ಸರ್ವ ಪ್ರಯತ್ನ ಮಾಡುತ್ತಿರುವ ಹೊರತಾಗಿಯೂ, ಚೀನಾಕ್ಕಿಂತ ಭಾರತ ತುಂಬಾ ಹಿಂದುಳಿದಿದೆ. ಚೀನಾ, ಭಾರತದ 3 ಪಟ್ಟು ರಕ್ಷಣಾ ಬಜೆಟ್‌ ಹೊಂದಿದೆ. ಭಾರತ ಕಳೆದ ವರ್ಷ ತನ್ನ ರಕ್ಷಣಾ ಬಜೆಟ್‌ನಲ್ಲಿ ಶೇ.2.4ರಷ್ಟುಏರಿಕೆ ಮಾಡಿದ್ದರೆ, ಚೀನಾ ಶೇ.25ರಷ್ಟುಏರಿಕೆ ಮಾಡಿದೆ. ಡೋಕ್ಲಾಮ್‌ ಸಂಘರ್ಷದ ನಂತರ ಎರಡೂ ದೇಶಗಳ ನಡುವಿನ ಮಿಲಿಟರಿ ಸಾಮರ್ಥ್ಯ ಪರಿಶೀಲಿಸಿದರೆ ಚೀನಾ ಹೆಚ್ಚು ತೂಕ ಹೊಂದಿರುವುದು ಸ್ಪಷ್ಟವಾಗುತ್ತದೆ. 2000ನೇ ಇಸವಿ ಬಳಿಕ ಚೀನಾ ಹೆಚ್ಚಿನ ಪ್ರಮಾಣದ ಸಬ್‌ಮರೀನ್‌ಗಳು, ಡಿಸ್ಟ್ರಾಯರ್‌ಗಳು, ಫ್ರೈಗೇಟ್ಸ್‌ಗಳನ್ನು ಬತ್ತಳಿಕೆಗೆ ಸೇರಿಸಿಕೊಂಡಿದೆ. ಇದು ಭಾರತ, ಜಪಾನ್‌ ದಕ್ಷಿಣಾ ಕೊರಿಯದ ಒಟ್ಟು ಖರೀದಿಗಿಂತ ಹೆಚ್ಚು. ಜೊತೆಗೆ ಭಾರತಕ್ಕಿಂತ ಚೀನಾ ಬಳಿ 6 ಲಕ್ಷ ಹೆಚ್ಚು ಸಕ್ರಿಯ ಯೋಧರಿದ್ದಾರೆ. ಚೀನಾದ ಬಳಿ 1200 ಯುದ್ಧ ವಿಮಾನಗಳಿದ್ದರೆ, ಭಾರತದ ಬಳಿ 785 ಇದೆ. ಭಾರತಕ್ಕಿಂತ 55 ಹೆಚ್ಚು ಕ್ರೂಸರ್‌ಗಳು, ಡಿಸ್ಟ್ರಾಯರ್‌ಗಳು ಮತ್ತು ಫ್ರೈಗೇಟ್ಸ್‌ಗಳನ್ನು ಚೀನಾ ಹೊಂದಿದೆ ಎಂದು ವರದಿ ಹೇಳಿದೆ.

ಬ್ರಿಟನ್‌ ಹಿಂದಿಕ್ಕಿ 5ನೇ ಸ್ಥಾನಕ್ಕೇರಿದ ಭಾರತ

ಭಾರತದ ರಕ್ಷಣಾ ವೆಚ್ಚ 3.41 ಲಕ್ಷ ಕೋಟಿ ರು.

ನಂ.1 ಅಮೆರಿಕ: 40 ಲಕ್ಷ ಕೋಟಿ ರು.

ನಂ.2: ಚೀನಾ: 10 ಲಕ್ಷ ಕೋಟಿ ರು.

ನಂ.3: ಸೌದಿ ಅರೇಬಿಯಾ: 5 ಲಕ್ಷ ಕೋಟಿ ರು.

ನಂ.4: ರಷ್ಯಾ: 4 ಲಕ್ಷ ಕೋಟಿ ರು.

ನಂ.5: ಭಾರತ: 3.41 ಲಕ್ಷ ಕೋಟಿ ರು.

ನಂ.6: ಬ್ರಿಟನ್‌: ಬ್ರಿಟನ್‌ 3.29

click me!