ಆಧಾರ್ ಮಾಹಿತಿ ಸೋರಿಕೆ ಬಗ್ಗೆ ವರದಿ ಮಾಡಿದ್ದಕ್ಕೆ ಪತ್ರಿಕೆ ವಿರುದ್ಧ ದೂರು ದಾಖಲಿಸಿದ ಆಧಾರ್

Published : Jan 07, 2018, 04:07 PM ISTUpdated : Apr 11, 2018, 12:35 PM IST
ಆಧಾರ್ ಮಾಹಿತಿ ಸೋರಿಕೆ ಬಗ್ಗೆ ವರದಿ ಮಾಡಿದ್ದಕ್ಕೆ ಪತ್ರಿಕೆ ವಿರುದ್ಧ ದೂರು ದಾಖಲಿಸಿದ ಆಧಾರ್

ಸಾರಾಂಶ

ಪತ್ರಿಕೆ ಹಾಗೂ ವರದಿಗಾರನ ವಿರುದ್ಧ ಐಟಿ ಕಾಯಿದೆಯ 66ನೆ ಸೆಕ್ಷನ್ ಹಾಗೂ ಆಧಾರ್ ಕಾಯಿದೆಯ 36/37 ಅನ್ವಯ ಐಪಿಸಿ ಸೆಕ್ಷನ್ 419(ಅನುಕರಣೆ ಮೂಲಕ ವಂಚನೆಗಾಗಿ ಶಿಕ್ಷೆ), 420(ವಂಚನೆ),468(ದಾಖಲೆ ತಿದ್ದುವಿಕೆ) ಹಾಗೂ 471(ದಾಖಲೆಯನ್ನು ನಕಲಿ ಮಾಡಿ ಬಳಸುವುದು)ರಡಿ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.

ನವದೆಹಲಿ(ಜ.07): ಆಧಾರ್ ಸಂಖ್ಯೆಗಳು ವಾಟ್ಸ್'ಅಪ್ ಮೂಲಕ ಮಾರಾಟವಾಗುತ್ತಿದೆ ಎಂದು ಇತ್ತೀಚಿಗಷ್ಟೆ ವರದಿ ಪ್ರಕಟಿಸಿದ್ದ ದಿ ಟ್ರಿಬ್ಯೂನ್ ಪತ್ರಿಕೆ ಹಾಗೂ ವರದಿ ಮಾಡಿದ್ದ ಪತ್ರಕರ್ತನ ವಿರುದ್ಧ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ಎಫ್'ಐಆರ್ ದಾಖಲಿಸಿದೆ.

ಯುಐಡಿಎಐ'ನ ಉಪ ನಿರ್ದೇಶಕ ಬಿ.ಎಂ. ಪಟ್ನಾಯಕ್  ಪತ್ರಿಕೆ ಟ್ರಿಬ್ಯೂನ್ ಹಾಗೂ ವರದಿಗಾರ ರಚ್ನಾ ಕೈರಾ ಹಾಗೂ ಲೇಖನಕ್ಕೆ ಸಹಕರಿಸಿದ ಅನಿಲ್ ಕುಮಾರ್,ಸುನೀಲ್ ಕುಮಾರ್ ಹಾಗೂ ರಾಜ್ ವಿರುದ್ಧ ಎಫ್'ಐಆರ್ ದಾಖಲಿಸಿದ್ದಾರೆ.

ಪತ್ರಿಕೆ ಹಾಗೂ ವರದಿಗಾರನ ವಿರುದ್ಧ ಐಟಿ ಕಾಯಿದೆಯ 66ನೆ ಸೆಕ್ಷನ್ ಹಾಗೂ ಆಧಾರ್ ಕಾಯಿದೆಯ 36/37 ಅನ್ವಯ ಐಪಿಸಿ ಸೆಕ್ಷನ್ 419(ಅನುಕರಣೆ ಮೂಲಕ ವಂಚನೆಗಾಗಿ ಶಿಕ್ಷೆ), 420(ವಂಚನೆ),468(ದಾಖಲೆ ತಿದ್ದುವಿಕೆ) ಹಾಗೂ 471(ದಾಖಲೆಯನ್ನು ನಕಲಿ ಮಾಡಿ ಬಳಸುವುದು)ರಡಿ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.

ದಿ ಟ್ರಿಬ್ಯೂನ್ ಜನವರಿ ಮೂರರಂದು ‘ಪೇಟಿಎಂ ಮೂಲಕ 500 ರು. ನೀಡಿದರೆ ಯಾವುದೇ ಅಡಚಣೆಯಿಲ್ಲದೆ, 10 ನಿಮಿಷದಲ್ಲಿ ಶತಕೋಟಿ ಆಧಾರ್ ಮಾಹಿತಿ ಲಭ್ಯವಾಗುತ್ತದೆ’ ಎಂದು ವಾಟ್ಸಪ್‌ನಲ್ಲಿ ಅನಾಮಿಕ ಸಂದೇಶವೊಂದು ಬಂದಿತ್ತು. ಇದರ ಜಾಡನ್ನು ಹಿಡಿದ ನಮ್ಮ ವರದಿಗಾರರು ಪೇಟಿಎಂ ಮೂಲಕ 500 ರು. ಪಾವತಿಸಿದರು. ಇದಾದ ಹತ್ತೇ ನಿಮಿಷದಲ್ಲಿ ಸಂಬಂಧಿಸಿದ ಏಜೆಂಟ್ ಒಬ್ಬ ವರದಿಗಾರರಿಗೆ ವೆಬ್‌ಸೈಟ್ ವಿಳಾಸ, ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ನೀಡಿದ.

ಅದರಲ್ಲಿ ನಮಗೆ ಬೇಕಾದ ಆಧಾರ್ ಸಂಖ್ಯೆಯನ್ನು ನಮೂದಿಸಿದರೆ ಆ ಖಾತೆದಾರರ ಸಂಪೂರ್ಣ ಮಾಹಿತಿಗಳು, ಫೋಟೋ, ವಿಳಾಸ, ದೂರವಾಣಿ ಸಂಖ್ಯೆ, ಜನ್ಮ ದಿನಾಂಕ, ಇ-ಮೇಲ್ ವಿಳಾಸ, ಪಿನ್ ಸಂಖ್ಯೆ ಇತ್ಯಾದಿಗಳು ಲಭ್ಯವಾದವು’ ಎಂದು ಎಂದು ಚಂಡೀಗಢ ಮೂಲದ ‘ದ ಟ್ರಿಬ್ಯೂನ್’ ಪತ್ರಿಕೆ ಗುರುವಾರ ವರದಿ ಮಾಡಿತ್ತು. ‘ಇದಲ್ಲದೆ ಇನ್ನೂ 300 ರು. ಹೆಚ್ಚಿಗೆ ನೀಡಿದಾಗ ಆ ಏಜೆಂಟ್ ಇನ್ನೊಂದು ಸಾಫ್ಟ್ವೇರ್ ನೀಡಿದ.

ಆ ಸಾಫ್ಟ್'ವೇರ್ ಮೂಲಕ ನಮಗೆ ಬೇಕಾದ ಆಧಾರ್ ಸಂಖ್ಯೆಗಳನ್ನು ನಮೂದು ಮಾಡಿದರೆ, ಆಧಾರ್ ಕಾರ್ಡನ್ನು ಮುದ್ರಿಸಿಕೊಳ್ಳಬಹು ದಾಗಿದೆ’ ಎಂದು ವರದಿ ಹೇಳಿತ್ತು.

ವರದಿ ಸಂಚಲನ ಮೂಡಿಸುತ್ತಿದ್ದಂತೆಯೇ ಕೂಡಲೇ ಸ್ಪಷ್ಟನೆ ನೀಡಿರುವ ಯುಐಡಿಎಐ, ‘ಅಂಥ ಯಾವುದೇ ಘಟನೆಗಳು ನಡೆದಿಲ್ಲ. ಆಧಾರ್ ಮಾಹಿತಿ ಸೋರಿಕೆ ವರದಿಗಳು ಸತ್ಯಕ್ಕೆ ದೂರ. ಆಧಾರ್ ನಲ್ಲಿ ಸಂಗ್ರಹವಾಗಿರುವ ಬಯೋ ಮೆಟ್ರಿಕ್, ಮಾಹಿತಿಗಳು ಸುರಕ್ಷಿತವಾಗಿವೆ ಎಂದು ಹೇಳಿ ಇದೀಕ ದೂರು ದಾಖಲಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾರು ಅಪಘಾತದಲ್ಲಿ ಮುಂಡಗೋಡು ಗ್ರಾಮ ಲೆಕ್ಕಾಧಿಕಾರಿ ಸ್ಥಳದಲ್ಲೇ ಸಾವು, ಮತ್ತಿಬರಿಗೆ ಗಾಯ
ಭಾರತೀಯರ ಕ್ರೇಜ್, ದುಬೈನ ಶಾರುಖ್ ಖಾನ್ ಆಫೀಸ್ ಟವರ್ ಬರೋಬ್ಬರಿ 5000 ಕೋಟಿ ರೂ ಗೆ ಮಾರಾಟ!