ಶಿರೂರು ಶ್ರೀ ಸಾವಿಗೆ ಕಾರಣವಾಗಿದ್ದೇನು..?

By Web DeskFirst Published Jul 29, 2018, 7:43 AM IST
Highlights

ಉಡುಪಿಯ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಾವಿನ ಪ್ರಕರಣದ ಸಂಭಂಧ ತನಿಖೆ ನಡೆಸುತ್ತಿರುವ  ಪೊಲೀಸರು ತಕ್ಷಣ ಸಂಭವಿಸಿದ ತೀವ್ರ ಅನಾರೋಗ್ಯದಿಂದಾದ ಆಕಸ್ಮಿಕ ಘಟನೆ ಎಂಬ
ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ.

ಉಡುಪಿ :  ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಾವು ತಕ್ಷಣ ಸಂಭವಿಸಿದ ತೀವ್ರ ಅನಾರೋಗ್ಯದಿಂದಾದ ಆಕಸ್ಮಿಕ ಘಟನೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ.

ಮರಣೋತ್ತರ ಪರೀಕ್ಷೆಯಲ್ಲೂ ಸಂಶಯಪಡುವಂಥ ಯಾವುದೇ ಅಂಶ ಪತ್ತೆಯಾಗಿಲ್ಲ ಎಂದು ಹೇಳಲಾಗಿದ್ದು, ಈ ಹಿನ್ನೆಲೆಯಲ್ಲಿ ಸದ್ಯ ಸಾವಿಗೆ ಕಾರಣವಾದ ಸ್ವಾಮೀಜಿ ಅವರ ದೈಹಿಕ ಅನಾರೋಗ್ಯ ಯಾವುದು ಎಂಬುದನ್ನು ತಿಳಿಯಲು ಫೊರೆನ್ಸಿಕ್ ವರದಿಗಾಗಿ ಪೊಲೀಸರು ಕಾಯು ತ್ತಿದ್ದಾರೆ. ಶ್ರೀಗಳ ನಿಗೂಢ ಸಾವಿನ ನಂತರ ಪೊಲೀಸರು ಅತ್ಯಂತ ವಿಸ್ತೃತವಾಗಿ ಸಂಶಯಿತ ವ್ಯಕ್ತಿಗಳ ವಿಚಾರಣೆ, ಕ್ಷೇತ್ರ ಕಾರ್ಯ, ಸ್ಥಳ ಪರಿಶೀಲನೆ, ಭೌತಿಕ ಸಾಕ್ಷ್ಯಾಧಾರಗಳ ಸಂಗ್ರಹ ಇತ್ಯಾದಿಗಳೆಲ್ಲವನ್ನೂ ಮುಗಿಸಿದ್ದಾ ಅದರಲ್ಲೂ ಸ್ವಾಮೀಜಿ ಗೆ ಹೊರಗಿನ ವ್ಯಕ್ತಿಗಳು ವಿಷಪ್ರಾಶನ ಮಾಡಿ ಸಿರುವ , ವಿಷ ಸೇವಿಸಿರುವ ಬಗ್ಗೆ ಯಾವುದೇ ಅಂಶ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. 

ಮರಣೋತ್ತರ ಪರೀಕ್ಷೆಯಲ್ಲೂ ಶಂಕೆ ಪಡುವಂಥ ಅಂಶ ಸಿಕ್ಕಿಲ್ಲ. ಯಕೃತ್ತು, ಕರುಳು ಮೊದಲೇ ಗುಣಪಡಿಸಲಾಗದಷ್ಟು ಕೆಟ್ಟಿದ್ದವು. ಅವರು ಸೇವಿಸಿದ ಮದ್ಯ ಅಥವಾ ಅವರ ದೇಹ ಪ್ರಕೃತಿಗೆ ಹೊಂದದ ಆಹಾರದ ವಿಪರೀತ ಸೇವನೆಯಿಂದ, ಯಕೃತ್ತು, ಕರುಳು, ಪಚನಾಂಗಗಳ ಮೇಲೆ ಬಿದ್ದ ಒತ್ತಡದಿಂದ ಆಂತರಿಕ ರಕ್ತಸ್ರಾವದ ನೋವು ಆಗಿದೆ. ಇದರಿಂದ ಚೇತರಿಸಿಕೊಳ್ಳಲಾಗದೆ ಮೃತಪಟ್ಟಿರುವ ಸಾಧ್ಯತೆಯೇ ಹೆಚ್ಚೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 

ಜೊತೆಗೆ ಸಿಸಿ ಕ್ಯಾಮೆರಾದ ಡಿವಿಆರ್‌ಗಳನ್ನು ತೆರೆಯಲು ಇನ್ನೂ ಸಾಧ್ಯವಾಗಿಲ್ಲ ಎನ್ನಲಾಗಿದ್ದು, ಅವುಗಳಿಂದ ಸಾವಿಗೆ ಬಾಹ್ಯ ಕಾರಣಗಳು ಪತ್ತೆಯಾಗುವ ಬಗ್ಗೆ ಪೊಲೀಸರಿಗೆ ನಂಬಿಕೆ ಇಲ್ಲ. ಶ್ರೀಗಳ ಅಕ್ರಮ ಸಂಬಂಧ, ಆಸ್ತಿ ವಿವಾದ, ವೈಷಮ್ಯ, ಧಾರ್ಮಿಕ ಭಿನ್ನಾಭಿಪ್ರಾಯ ಇತ್ಯಾದಿ ಆಯಾ ಮಗಳನ್ನೂ ಪೊಲೀಸರು ಜಾಲಾಡಿಸಿದ್ದಾರೆ. ಆದರೆ ಅವು ಯಾವುವೂ ಶ್ರೀಗಳ ಸಾವಿಗೆ ಕಾರಣವಾಗುವಷ್ಟು ಆಳವಾಗಿಲ್ಲ ಎನ್ನಲಾಗಿದೆ.

ಉಪವಾಸ ಆರಂಭಿಸಿದ್ದರೇ?: ತಮ್ಮ ಪಟ್ಟದ ವಿಠಲ ದೇವರ ವಿಗ್ರಹ ಪಡೆಯಲು ಶಿರೂರು ಶ್ರೀ ನಿರಶನ ಆರಂಭಿಸಿದ್ದರೆನ್ನುವ ಕುತೂಹಲಕಾರಿ ವಿಚಾರ ಬೆಳಕಿಗೆ ಬಂದಿದೆ. ಜೂ.24 ರಂದು  ಉಡುಪಿ ಎಸ್ಪಿಗೆ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ಅನಾರೋಗ್ಯದ ಸಂದರ್ಭದಲ್ಲಿ ಪಟ್ಟದ ದೇವರನ್ನು ಕೃಷ್ಣ ಮಠಕ್ಕೆ ನೀಡಿದ್ದೆ, ಈಗ ಆರೋಗ್ಯ ಸರಿಯಾಗಿದ್ದರೂ ಇತರ ಮಠಾ ಧೀಶರು ಪಟ್ಟದ ದೇವರನ್ನು ಹಿಂದಕ್ಕೆ ನೀಡುತ್ತಿಲ್ಲ,  ಆದ್ದರಿಂದ ಉಪವಾಸ ವ್ರತ ಆರಂಭಿಸಿ ದ್ದೇನೆ. ಅನಾಹುತಗಳು ನಡೆದರೆ ಮಠಾಧೀಶರೇ ಹೊಣೆ ಎಂದು ಎಚ್ಚರಿಸಿದ್ದರೆನ್ನಲಾಗಿದೆ. 

click me!