ಉಡುಪಿಯ ಚೈತ್ರಾ ಆತ್ಮಹತ್ಯೆ ಪ್ರಕರಣ: ಆರೋಪಿಗಳಿಗೆ ಪ್ರಮೋದ್ ಮಧ್ವರಾಜ್ ಕೃಪಾಕಟಾಕ್ಷ?

By Suvarna Web DeskFirst Published Oct 27, 2016, 3:22 AM IST
Highlights

ಸೆಪ್ಟೆಂಬರ್ 28ರಂದು ಉಡುಪಿಯ ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಳು.  ಈ ಸಂಬಂಧ ಪ್ರಿಯತಮ ಆದರ್ಶ್ ಸೇರಿ ಮೂವರ  ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿದ್ದಾರೆ. ಆದ್ರೆ ಆರೋಪಿಗಳನ್ನು ಮಾತ್ರ ಇನ್ನು ಬಂಧಿಸಿಲ್ಲ. ಇದಕ್ಕೆ ಜಿಲ್ಲಾ ಉಸ್ತುವಾರಿ  ಸಚಿವ ಪ್ರಮೋದ್ ಮಧ್ವರಾಜ್ ಕೃಪೆಯಿದೆಯೆಂಬ ಆರೋಪ ಕೇಳಿ ಬಂದಿದೆ.

ಉಡುಪಿ(ಅ.27): ಸೆಪ್ಟೆಂಬರ್ 28ರಂದು ಉಡುಪಿಯ ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಳು.  ಈ ಸಂಬಂಧ ಪ್ರಿಯತಮ ಆದರ್ಶ್ ಸೇರಿ ಮೂವರ  ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿದ್ದಾರೆ. ಆದ್ರೆ ಆರೋಪಿಗಳನ್ನು ಮಾತ್ರ ಇನ್ನು ಬಂಧಿಸಿಲ್ಲ. ಇದಕ್ಕೆ ಜಿಲ್ಲಾ ಉಸ್ತುವಾರಿ  ಸಚಿವ ಪ್ರಮೋದ್ ಮಧ್ವರಾಜ್ ಕೃಪೆಯಿದೆಯೆಂಬ ಆರೋಪ ಕೇಳಿ ಬಂದಿದೆ.

ಉಡುಪಿಯ ಚೈತ್ರ ಆತ್ಮಹತ್ಯೆ ಮಾಡಿಕೊಂಡು ತಿಂಗಳಾಗುತ್ತಾ ಬಂದಿದೆ. ಪ್ರಕರಣ ಸಂಬಂಧ ಮೂವರು ಯುವಕರ ಮೇಲೆ ಕೇಸು ದಾಖಲಾಗಿ ಇಪ್ಪತ್ತು ದಿನಗಳಾಗಿದೆ. ತಡವಾಗಿಯಾದರೂ ಕುಟುಂಬದ ಒತ್ತಾಯದ ಮೇರೆಗೆ ಮೂವರು ಆರೋಪಿಗಳ ಮೇಲೆ ಪೋಕ್ಸೋ ಕಾಯ್ದೆಯನ್ನು ಪೊಲೀಸರು ದಾಖಲಿಸಿದ್ದಾರೆ. ಆದರಿನ್ನೂ ಆರೋಪಿಗಳು ಬಂಧನವಾಗಿಲ್ಲ.ಕನಿಷ್ಟ ತನಿಖಾ ವರದಿಯನ್ನೂ ಪೊಲೀಸರು ಸಿದ್ದಪಡಿಸಿಲ್ಲ.

ಆರೋಪಿ ಸ್ಥಾನದಲ್ಲಿರುವ ಆದರ್ಶ್ ಸಾಗರ್ ಮತ್ತು ಪವನ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಪೋಕ್ಸೋ ಕಾಯ್ದೆ ಹಾಕುವ ಮೂಲಕ ಆರೋಪಿಗಳಿ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಆರೋಪಿಗಳಿಗೆ ರಕ್ಷಣೆ ಕೊಡುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ದೂರಿದೆ. ಆದರ್ಶ್, ಸಾಗರ್ ಮತ್ತು ಪವನ್ ಕಾಂಗ್ರೆಸ್ ಕಾರ್ಯಕರ್ತರು. ಆರೋಪಿಗಳ ಪೋಷಕರು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಆಪ್ತರು. ಹೀಗಾಗಿ ಆರೋಪಿಗಳನ್ನಿನ್ನೂ ಬಂಧಿಸಿಲ್ಲ ಎಂಬ ದೂರುಗಳು ಕೇಳಿಬರುತ್ತಿದೆ.

ಆದರೆ ಈ ಆರೋಪವನ್ನು ಪೊಲೀಸ್ ಇಲಾಖೆ ತಳ್ಳಿಹಾಕಿದೆ. ತನಿಖೆ ನಿಸ್ಪಷ್ಕಪಾತವಾಗಿ ಮಾಡುವುದಾಗಿ ಪೊಲೀಸರು ಹೇಳಿದ್ದಾರೆ. ಪ್ರಕರಣ ದಿನಕಳೆದಂತೆ ಜಠಿಲವಾಗುತ್ತಿದ್ದು ಈ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ತನಿಖೆ ನೀಡುವಂತೆ ಆಗ್ರಹಿಸಲು ಕುಟುಂಬ ವರ್ಗ ಚಿಂತನೆಯಲ್ಲಿದೆ.

click me!