ರುದ್ರೇಶ್ ಹತ್ಯೆ ಪ್ರಕರಣದ 4 ಆರೋಪಿಗಳೂ ಅರೆಸ್ಟ್: ಸುವರ್ಣ ನ್ಯೂಸ್ ವರದಿ ಖಚಿತಪಡಿಸಿದ ಕಮೀಷನರ್

By suvarna web deskFirst Published Oct 27, 2016, 2:47 AM IST
Highlights

ಮೊಹ್ಮದ್ ಸಾಧಿಕ್ ಅಲಿಯಾಸ್ ಮಹ್ಮದ್ ಮಜರ್, ಮೊಹ್ಮದ್ ಮುಜೀಮುಲ್ಲಾ ಅಲಿಯಾಸ್ ಮೌಲ ಮುಜೀಬ್, ವಾಸೀಂ ಅಹ್ಮದ್, ಇರ್ಫಾನ್ ಪಾಷ ಬಂಧಿತ ಆರೋಪಿಗಳು.

ಬೆಂಗಳೂರು(ಅ.27): ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನ ಕುರಿತಂತೆ ಬೆಳಗ್ಗಿನಿಂದ ಸುವರ್ಣ ನ್ಯೂಸ್ ಮಾಡುತ್ತಿದ್ದ ವರದಿಯನ್ನ ನಗರ ಪೊಲೀಸ್ ಆಯುಕ್ತ ಮೇಘರಿಕ್​ ಖಚಿತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೇಘರಿಕ್, ಬೆಳಗ್ಗೆ ಮೂವರು ಆರೋಪಿಗಳನ್ನ ಬಂಧಿಸಲಾಗಿತ್ತು. ಸಂಜೆ ನಾಲ್ಕನೇ ಆರೋಪಿ ಇರ್ಫಾನ್`ನನ್ನೂ ಬಂಧಿಸಲಾಗಿದ್ದು, ಪ್ರಕರಣ ಸಂಬಂಧ ಒಟ್ಟು 4 ಆರೋಪಿಗಳ ಬಂಧನವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮೊಹ್ಮದ್ ಸಾಧಿಕ್ ಅಲಿಯಾಸ್ ಮಹ್ಮದ್ ಮಜರ್, ಮೊಹ್ಮದ್ ಮುಜೀಮುಲ್ಲಾ ಅಲಿಯಾಸ್ ಮೌಲ ಮುಜೀಬ್, ವಾಸೀಂ ಅಹ್ಮದ್, ಇರ್ಫಾನ್ ಪಾಷ ಬಂಧಿತ ಆರೋಪಿಗಳು.

CLICK HERE.. ರುದ್ರೇಶ್ ಹಂತಕರು ಯಾವ ಸಂಘಟನೆಗೆ ಸೇರಿದವರು ಗೊತ್ತಾ..?

ಈ ಎಲ್ಲಾ ಆರೋಪಿಗಳು ಸಹ ಸ್ಥಳೀಯರೇ ಆಗಿದ್ದು, ಆರೋಪಿಗಳಿಂದ 2 ದ್ವಿಚಕ್ರವಾಹನ ವಶಕ್ಕೆ ಪಡೆಯಲಾಗಿದೆ. ರುದ್ರೇಶ್ ಬೆಳವಣಿಗೆ ಸಹಿಸಲಾಗದೆ ಹತ್ಯೆ ಮಾಡಲಾಗಿದೆ. ಆರೋಪಿಗಳ ಬಂಧನದಿಂದ ರಿಲೀಫ್ ಸಿಕ್ಕಿದೆ ಎಂದು ಮೇಘರಿಕ್ ಹೇಳಿದ್ಧಾರೆ.

​ಬಂಧಿತರು ಮೋಟಾರ್ ಮೆಕ್ಯಾನಿಕ್​ಗಳಾಗಿ ಕೆಲಸ ಮಾಡುತ್ತಿದ್ದರು. ಸಮುದಾಯಕ್ಕೆ ಕಿರುಕುಳ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾರೆ  ಎಂದು ನಗರ ಪೊಲೀಸ್ ಆಯುಕ್ತ ಎನ್​.ಎಸ್​. ಮೇಘರಿಕ್​ ಹೇಳಿದ್ದಾರೆ.

 

 

 

click me!