ಊಬರ್'ನಿಂದ ಶೀಘ್ರದಲ್ಲೇ ಹಾರುವ ಕಾರುಗಳ ತಯಾರಿಕೆ: ವಿಮಾನ ಬಿಡಿ ಈಗ ಕಾರಿನಲ್ಲೆ ಹಾರಾಡಿ

Published : Feb 08, 2017, 01:08 PM ISTUpdated : Apr 11, 2018, 12:50 PM IST
ಊಬರ್'ನಿಂದ ಶೀಘ್ರದಲ್ಲೇ ಹಾರುವ ಕಾರುಗಳ ತಯಾರಿಕೆ: ವಿಮಾನ ಬಿಡಿ ಈಗ ಕಾರಿನಲ್ಲೆ ಹಾರಾಡಿ

ಸಾರಾಂಶ

ತಮ್ಮ ಮನೆಯಿಂದಲೇ ಎಲ್ಲಂದರಲ್ಲಿಗೆ ಹಾರಾಡಬಹುದು. ಟ್ರಾಫಿಕ್ ಜಂಜಾಟವಿಲ್ಲದೆ ಕಚೇರಿಗೆ ಹೋಗಬಹುದು. ಒಂದು ದಿನದ ಪ್ರವಾಸವನ್ನು ಕೈಗೊಳ್ಳಬಹುದು.

ಸ್ಯಾನ್ ಫ್ರಾನ್ಸಿಸ್ಕೋ(ಫೆ.08): ವಿಮಾನದಲ್ಲಿ ಹಾರಾಡುವ ಕನಸು ಕಾಣುತ್ತಿದ್ದವರಿಗೆ ಇನ್ನು ಮುಂದೆ ಕಾರಿನ ಮೂಲಕವೇ  ಈಡೇರಿಸಿಕೊಳ್ಳುವ ಸೌಭಾಗ್ಯ ಶೀಘ್ರದಲ್ಲಿಯೇ ಈಡೇರಲಿದೆ.

ತಮ್ಮ ಮನೆಯಿಂದಲೇ ಎಲ್ಲಂದರಲ್ಲಿಗೆ ಹಾರಾಡಬಹುದು. ಟ್ರಾಫಿಕ್ ಜಂಜಾಟವಿಲ್ಲದೆ ಕಚೇರಿಗೆ ಹೋಗಬಹುದು. ಒಂದು ದಿನದ ಪ್ರವಾಸವನ್ನು ಕೈಗೊಳ್ಳಬಹುದು. ಒಟ್ಟಿನಲ್ಲಿ ದುಬಾರಿ ಖರ್ಚಿನ ವಿಮಾನವಿಲ್ಲದೆ ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು.

ಇಂತಹದೊಂದು ಕನಸನ್ನು ಜಾಗತಿಕ ಟ್ಯಾಕ್ಸಿ ಸೇವಾ ಕಂಪನಿ ಊಬರ್ ನೆರವೇರಿಸಲಿದೆ. ಈಗಾಗಲೇ ಹಾರುವ ಕಾರುಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಊಬರ್ ಉನ್ನತ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಾಸಾದ ಮಾಜಿ ಇಂಜಿನಿಯರ್ ಒಬ್ಬರನ್ನು ನೇಮಕ ಮಾಡಿಕೊಂಡಿದೆ. ಈ ಹಾರುವ ಕಾರುಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದರೂ ಪರಿಸರ ಸ್ನೇಹಿಯಾಗಿದ್ದು, ಯಾವುದೇ ರೀತಿಯ ಮಾಲಿನ್ಯವನ್ನು ಉಂಟು ಮಾಡುವುದಿಲ್ಲ.  

ಊಬರ್ ಸಂಸ್ಥೆ ಈಗಾಗಲೇ ವೋಲ್ವೊ ಹಾಗೂ ಡೈಲ್ಮರ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಚಾಲಕ ರಹಿತ ಕಾರುಗಳನ್ನು ತಯಾರಿಸುತ್ತಿವೆ. ಇನ್ನು ಕೆಲವು ವರ್ಷಗಳಲ್ಲಿ ಹಾರುವ ಕಾರುಗಳು ಜಾಗತಿಕ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ವಿಮಾನವಿಲ್ಲದೆ ಕಾರಿನಲ್ಲಿಯೇ ಹಾರುವ ಕನಸನ್ನು ನನಸು ಮಾಡಿಕೊಳ್ಳಬಹುದು.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ, ವಿವಿಐಪಿಗೆ ಐದು ಹೆಲಿಪ್ಯಾಡ್ ವ್ಯವಸ್ಥೆ!
ಲಿಯೋನಲ್ ಮೆಸ್ಸಿಗೆ ಪಾಸ್ ವೈಡ್ ಪಾಸ್ ಕೊಟ್ಟು ವೈರಲ್ ಆದ ಸಿಎಂ ರೇವಂತ್ ರೆಡ್ಡಿ