![[ಸುಳ್ ಸುದ್ದಿ] ಸಿಎಂ ಇಪಿಎಸ್ ಡಿಸಿಎಂ ಒಪಿಎಸ್ ಎಂದು ಸ್ಪೀಡಾಗಿ 100 ಸಲ ಹೇಳಿದ್ರೆ ಗಿಫ್ಟ್!](https://static.asianetnews.com/images/w-412,h-232,imgid-ac020f69-1134-4611-8be5-a5ce68204183,imgname-image.jpg)
ತಮಿಳುನಾಡು ಎಐಎಡಿಎಂಕೆ ಪಕ್ಷದ ಬಣಗಳು ಒಂದಾಗಿರುವ ಸಂಭ್ರಮಾಚರಣೆಯನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ರಾಜ್ಯಾದ್ಯಂತ ವಿಶೇಷ ಸ್ಪರ್ಧೆ ಏರ್ಪಡಿಸಲಾಗಿದೆ.
ಸಿಎಂ ಇಪಿಎಸ್ ಡಿಸಿಎಂ ಒಪಿಎಸ್ ಎಂದು 100 ಬಾರಿ ವೇಗವಾಗಿ ಒಂದೂ ತಪ್ಪಿಲ್ಲದೆ ಹೇಳುವುದೇ ಆ ಸ್ಪರ್ಧೆ. ಇದನ್ನು ಹೇಳಿದರೆ ಮಕ್ಕಳಿಗೆ ಪಕ್ಷದ ವತಿಯಿಂದ ವಿಶೇಷ ಗಿಫ್ಟ್ ನೀಡಲಾಗುತ್ತದೆ.
ಈ ಸ್ಪರ್ಧೆಯಿಂದಾಗಿ ಪಕ್ಷದ ಬಗ್ಗೆ ಮಕ್ಕಳಿಗೂ ತಿಳಿದಂತಾಗುತ್ತದೆ ಮತ್ತು ತಮ್ಮಿಬ್ಬರ ಹೆಸರು ಎಲ್ಲರ ಬಾಯಲ್ಲೂ ಹರಿದಾಡುತ್ತಿರುತ್ತದೆ ಎಂಬ ಲೆಕ್ಲಚಾರ ಇ. ಪಳನಿಸ್ವಾಮಿ ಹಾಗೂ ಒ ಪನ್ನೀರ್ಸೆಲ್ವಂ ಅವರದ್ದು ಎನ್ನಲಾಗಿದೆ. ಹೆಳಲು ಒಂಥರಾ ಮಜವಾಗಿರುವುದರಿಂದ ತಮಿಳುನಾಡಿನೆಲ್ಲೆಡೆ ಮಕ್ಕಳ ಬಾಯಲ್ಲಿ ಇದೇ ಹರಿದಾಡುತ್ತಿದೆ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.