ಸದ್ದಿಲ್ಲದೆ ಅಮಿತ್ ಶಾ ಭೇಟಿ ; ‘ಕೈ’ ತೊರೆದು ಕಮಲ ಹಿಡಿದ ಇಬ್ಬರು ಶಾಸಕರು

By Web DeskFirst Published Oct 16, 2018, 8:39 PM IST
Highlights

ರಾಜಕಾರಣದಲ್ಲಿ ಯಾವಾಗ, ಎಷ್ಟೊತ್ತಿಗೆ ಯಾವ ಘಟನೆ ನಡೆಯುತ್ತದೆ ಎಂದು  ಹೇಳಲು ಅಸಾಧ್ಯ. ಗೋವಾದ ಸಿಎಂ ಮನೋಹರ್ ಪರ್ರೀಕರ್ ಆರೋಗ್ಯದಲ್ಲಿ ಏರುಪೇರಾಗಿದ್ದರೆ ಇತ್ತ ರಾಜ್ಯ ಕಾಂಗ್ರೆಸ್ ಗೆ ಇಬ್ಬರು ಶಾಸಕರು ಶಾಕ್ ನೀಡಿದ್ದಾರೆ.

ಪಣಜಿ[ಅ.16] ಗೋವಾದ ಇಬ್ಬರು ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಬಿಜೆಪಿ ಸೇರಲು ವೇದಿಕೆ ಸಿದ್ಧ ಮಾಡಿಕೊಂಡಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ ಮಾಡಿದ ನಂತರ ಬಿಜೆಪಿ ಸೇರುವ ಮಾತನಾಡಿದ್ದಾರೆ.

ಕಾಂಗ್ರೆಸ್ ಶಾಸಕರಾಗಿದ್ದ ದಯಾನಂದ್ ಸೊಪ್ಟೆ ಮತ್ತು ಸುಭಾಶ್ ಶಿರೋಡ್ಕರ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ಗೋವಾ ವಿಧಾನಸಭೆ ಸ್ಪೀಕರ್ ಪ್ರಮೋದ್ ಸಾವಂತ್ ಅವರು ತಿಳಿಸಿದ್ದು ಅಂಗೀಕಾರ ಸಹ ಆಗಿದೆ. 40 ಶಾಸಕರ ವಿಧಾನಸಭೆಯಲ್ಲಿ ಕಾಂಗ್ರೆಸ್ ಬಲ 16ರಿಂದ 14ಕ್ಕೆ ಕುಸಿದಿದೆ.

ಗೋವಾದ ಬಿಜೆಪಿ ಸರಕಾರದ ವಿರುದ್ಧ ಅವಿಶ್ವಾಸ ಮಂಡಿಸಲು ಮುಂದಾಗಿದ್ದ ಕಾಂಗ್ರೆಸ್ ಗೆ ಈ ರಾಜೀನಾಮೆ ಭಾರೀ ಮುಖಭಂಗ ಮಾಡಿದೆ. ಒಟ್ಟಿನಲ್ಲಿ  ಈ ಬೆಳವಣಿಗೆ ಗೋವಾದಲ್ಲಿ ಬಿಜೆಪಿ ಸರಕಾರ ಮುಂದುವರಿಯಲಿದೆ ಎಂಬ ಮಾತಿಗೆ ಮತ್ತಷ್ಟು ಪುಷ್ಠಿ ನೀಡಿದೆ.

 

Goa Congress MLAs, Subhash Shirodkar and Dayanand Sobte joined ⁦⁩ in New Delhi on Tuesday. Also in the pic, Raul Minister ⁦⁩ . Pic pic.twitter.com/mslV9P3sqy

— Nistula Hebbar (@nistula)

I received resignation from 2 Congress MLAs Dayanand Sopte & Subhash Shirodkar. They confirmed they're doing this willingly, without any pressure. I accepted the resignations. Process will be completed, copies will be sent to all members of House, Guv & EC: Goa Assembly speaker pic.twitter.com/dek9epbXcb

— ANI (@ANI)
click me!