
ಬೆಂಗಳೂರು[ಜು. 02] ರಾಜ್ಯದ ದೋಸ್ತಿ ಸರಕಾರದ ವಿರುದ್ಧ ವಾಗ್ದಾಳಿ ಮಾಡಿದ್ದ ಸಂಸದೆ ಶೋಭಾ ಕರಂದ್ಲಾಜೆ ವಿಧಾನಸಭೆಯಲ್ಲಿ ಬಿಜೆಪಿಯ 105 ಶಾಸಕರಿದ್ದಾರೆ ಎಂದು ಹೇಳುತ್ತ ಜನರ ತೀರ್ಪು ನಮ್ಮ ಪರವಾಗಿದೆ ಎಂದು ಪ್ರತಿಪಾದನೆ ಮಾಡಿದ್ದರು. 105 ದೊಡ್ಡದೋ ಅಥವಾ 78 ದೊಡ್ಡದೋ ಎಂಬ ಅರ್ಥದಲ್ಲಿ ಪ್ರಶನೆ ಮಾಡಿದ್ದರು.
ಇದಕ್ಕೆ ಉತ್ತರ ನೀಡಿರುವ ಸಿದ್ದರಾಮಯ್ಯ ನಿಮ್ಮ ಬಳಿ ಸರಕಾರ ರಚಿಸಲು ಸಾಧ್ಯವಾಗುವಂತಿದ್ದರೆ ರಾಜ್ಯಪಾಲರ ಎದುರು ಹಕ್ಕು ಮಂಡನೆ ಮಾಡಿ ಎಂದು ಮರು ಸವಾಲು ಎಸೆದಿದ್ದಾರೆ. ಒಂದೇ ನಿಮಿಷ ತೆಗೆದುಕೊಂಡು ನಿಮ್ಮ ಕೆಟ್ಟ ರಾಜಕಾರಣ ಬದಿಗಿಟ್ಟು ಗಣಿತ ಮತ್ತು ಪ್ರಜಾಪ್ರಭುತ್ವದ ಪಾಠ ಕಲಿಯಿರಿ ಎಂದು ಕಾಲೆಳೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.