ಗಂಡನಿಗೆ ಮುತ್ತಿಡುವಾಗ ಗರ್ಭಿಣಿ ಪತ್ನಿ ಮಾಡಿದ್ದೇನು..?

Published : Sep 24, 2018, 12:18 PM IST
ಗಂಡನಿಗೆ ಮುತ್ತಿಡುವಾಗ ಗರ್ಭಿಣಿ ಪತ್ನಿ ಮಾಡಿದ್ದೇನು..?

ಸಾರಾಂಶ

ದಿಲ್ಲಿಯ ರನ್ ಹೋಲಾ ಪ್ರದೇಶದಲ್ಲಿ ಗರ್ಭಿಣಿಯೋರ್ವಳು ಗಂಡನಿಗೆ ಮುತ್ತನ್ನಿಡುವ ನೆಪದಲ್ಲಿ ಆತನ ನಾಲಿಗೆಯನ್ನೇ ಕಚ್ಚಿದ ಘಟನೆ ನಡೆದಿದೆ.

ನವದೆಹಲಿ : ದಿಲ್ಲಿಯಲ್ಲಿ ಗರ್ಭಿಣಿಯೋರ್ವಳು ಗಂಡನಿಗೆ ಮುತ್ತನ್ನಿಡುವ ವೇಳೆ ಆತನ ನಾಲಿಗೆಯನ್ನೇ ಕಚ್ಚಿದ ಘಟನೆಯೊಂದು ಬೆಳಕಿಗೆ ಬಂದಿದೆ. 

ಶನಿವಾರ ರಾತ್ರಿ ದಿಲ್ಲಿಯ ರನ್ ಹೋಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 

8 ತಿಂಗಳ ಗರ್ಭಿಣಿಯಾಗಿರುವ ಆಕೆ ತನ್ನ 22 ವರ್ಷದ ಗಂಡನೊಂದಿಗೆ ಖುಷಿಯಿಂದ ಇರಲಿಲ್ಲ. ಆತ ನೋಡಲು ಸುಂದರವಾಗಿಲ್ಲ ಎಂದು ಆತನೊಂದಿಗೆ ಅಸಮಾಧಾನವನ್ನು ಹೊಂದಿದ್ದಳು. 

ಇದೇ ಕಾರಣಕ್ಕಾಗಿ ಗಂಡ ಹೆಂಡತಿ ನಡುವೆ ಯಾವಾಗಲೂ ಕೂಡ ಗಲಾಟೆ ನಡೆಯುತ್ತಿದ್ದು, ಶನಿವಾರ ಮುತ್ತನ್ನಿಡುವ ನಾಟಕವಾಡಿ ಆತನ ನಾಲಿಗೆಯನ್ನು ಕಚ್ಚಿದ್ದಾಳೆ ಎಂದು ಪೊಲೀಸರಿಗೆ ಪತಿಯ ಕುಟುಂಬಸ್ಥರು ದೂರು ನೀಡಿದ್ದಾರೆ. 

ಸದ್ಯ ಆತನನ್ನು ದಿಲ್ಲಿಯ ಸಫ್ದಾಗರ್ ಆಸ್ಪತ್ರೆಗೆ ದಾಖಲು ಮಾಡಿ ಸರ್ಜರಿ ನಡೆಸಲಾಗಿದೆ. ಅಲ್ಲದೇ ಆಕೆಯ ವಿರುದ್ಧ ದೂರು ದಾಖಲು ಮಾಡಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಲವ್ ಮಾಡು, ಇಲ್ಲಾಂದ್ರೆ ಸಾಯ್ತೀನಿ: ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಕಿರುಕುಳ ಕೊಟ್ಟ ಖತರ್ನಾಕ್ ಲೇಡಿ
ಸರ್ಕಾರಿ ನೇಮಕಾತಿ ವಿಳಂಬ: ಮನನೊಂದು ಧಾರವಾಡ ರೈಲು ಹಳಿಗೆ ಸಿಲುಕಿ ಯುವತಿ ದಾರುಣ ಸಾವು!