ಮೋದಿ ಮಾಸ್ಟರ್ ಸ್ಟ್ರೋಕ್'ಗೆ ಟ್ವೀಟಿಗರು ಏನಂದ್ರು...?

Published : Nov 09, 2016, 07:04 AM ISTUpdated : Apr 11, 2018, 12:46 PM IST
ಮೋದಿ ಮಾಸ್ಟರ್ ಸ್ಟ್ರೋಕ್'ಗೆ ಟ್ವೀಟಿಗರು ಏನಂದ್ರು...?

ಸಾರಾಂಶ

ಈ ಬೆನ್ನಲೇ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ನಿರ್ಧಾರನವನ್ನು ಬೆಂಬಲಿಸಿ ಹಲವರು ಟ್ವೀಟ್ ಸುರಿಮಳೆಯನ್ನೇ ಸುರಿಸಿದ್ದಾರೆ. ಹಲವರು ಈ ನಿರ್ಧಾರವನ್ನು ವಿರೋಧಿಸಿದ್ದಾರೆ ಸಹ. 

ಬೆಂಗಳೂರು(ನ.09): ದೇಶದ ನಾಗರೀಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ 500 ರೂ ಹಾಗೂ 1000 ರೂ ಮುಖ ಬೆಲೆಯ ನೋಟುಗಳನ್ನು ನಿಷೇಧಿಸುತ್ತಿರುವುದಾಗಿ ತಿಳಿಸಿದರು. ಇದರ ಬದಲಾಗಿ ಹೊಸ ಮಾದರಿಯ 500 ರೂ ಹಾಗೂ 2000 ರೂ ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತರುವುದಾಗಿ ಘೋಷಿಸಿದರು. 

ಈ ಬೆನ್ನಲೇ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ನಿರ್ಧಾರನವನ್ನು ಬೆಂಬಲಿಸಿ ಹಲವರು ಟ್ವೀಟ್ ಸುರಿಮಳೆಯನ್ನೇ ಸುರಿಸಿದ್ದಾರೆ. ಹಲವರು ಈ ನಿರ್ಧಾರವನ್ನು ವಿರೋಧಿಸಿದ್ದಾರೆ ಸಹ. 

1) ಹ್ಯಾಟ್ಸ್​ ಆಪ್ ಮೋದಿ ಜೀ. ಭಾರತ ಈಗ ಹುಟ್ಟಿದೆ. ರಜನಿಕಾಂತ್​, ನಟ

2) ಕಪ್ಪು ಹಣದ ವಿರುದ್ಧ ಭರ್ಜರಿ ಸಿಕ್ಸ್​ ಹೊಡೆದ ಮೋದಿಯವರಿಗೆ ಜೈ. 1000 ರೂಪಾಯಿ, 500 ರೂಪಾಯಿ ನೋಟ್​ ನಿಲ್ಲಿಸುವಂತ ನಿರ್ಧಾರ ತೆಗೆದುಕೊಂಡ ಮೋದಿಯವರ ಎದೆಗಾರಿಕೆ ಮೆಚ್ಚುವಂತಹದು- ಹರ್ಭಜನ್ ಸಿಂಗ್​, ಕ್ರಿಕೆಟಿಗ

3) ಈ ಕೆಟ್ಟ ನಿರ್ಧಾರವನ್ನು ಹಿಂತೆಗೆದುಕೊಳ್ಳಿ- ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ

4) ಅಮೇರಿಕಾದವರು ವೋಟ್​ ಲೆಕ್ಕ ಹಾಕುತ್ತಿದ್ದರೆ. ಭಾರತದವರು ನೋಟ ಲೆಕ್ಕ ಹಾಕುತ್ತಿದ್ದಾರೆ - ವೀರೇಂದ್ರ ಸೆಹ್ವಾಗ್​ ಮಾಜಿ ಕ್ರಿಕೆಟಿಗ

5) ಹೊಸ ಎರಡು ಸಾವಿರ ರೂಪಾಯಿ ನೋಟು ಪಿಂಕ್​ ಬಣ್ಣದಲ್ಲಿದೆ. ಇದು ಪಿಂಕ್ ಚಿತ್ರದ ಎಫಕ್ಟ್-- ಅಮಿತಾಭ್​ ಬಚ್ಚನ್​, ಬಾಲಿವುಡ್​ ನಟ

6) ಪ್ರಧಾನಿಯವರ ನಿರ್ಧಾರ ಅದ್ಭುತವಾದದ್ದು. ಕಪ್ಪು ಹಣ ತಡೆಗಟ್ಟುವುದಕ್ಕೆ ಅವರು ತೆಗೆದುಕೊಂಡ ನಿರ್ಧಾರ ಸ್ವಾಗತರ್ಹ. ಎಲ್ಲರು ಮೋದಿಯವರನ್ನು ಬೆಂಬಲಿಸೋಣ- ಅನುಷ್ಕಾ ಶರ್ಮಾ, ಬಾಲಿವುಡ್​ ನಟಿ

7) ಭರ್ಜರಿ ಗೂಗ್ಲಿ ಹಾಕಿದ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ನಡೆ ಸ್ವಾಗತರ್ಹ ವೆಲ್ ಡನ್​ ಸರ್​- ಅನಿಲ್​ ಕುಂಬ್ಳೆ, ಭಾರತ ತಂಡದ ಕೋಚ್​

8) ಕಪ್ಪು ಹಣವನ್ನು ಹೊಂದಿರುವವರ ಪಾಲಿಗೆ ಕರಾಳ ದಿನ- ಅನುರಾಗ್​ ಠಾಕೂರ್, ಬಿಸಿಸಿಐ ಅಧ್ಯಕ್ಷ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ
ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!