
ಬೆಂಗಳೂರು: ಅಪಹರಣ, ಕೊಲೆ ಯತ್ನ ಪ್ರಕರಣದಲ್ಲಿ ಬಂಧಿತನಾಗಿರುವ ಬಿಗ್‌ಬಾಸ್ ರಿಯಾಲಿ ಶೋ ಖ್ಯಾತಿ ಯ ಸುನಾಮಿ ಕಿಟ್ಟಿಯನ್ನು ಹೆಚ್ಚಿನ ವಿಚಾರಣೆಗಾಗಿ ಜ್ಞಾನಭಾರತಿ ಪೊಲೀಸರು ಐದು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.
ಕೃತ್ಯದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿ ರುವ ಅನುಮಾನ ಇರುವುದರಿಂದ ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದೆವು. ಮನವಿ ಪುರಸ್ಕರಿಸಿದ ನ್ಯಾಯಾಲಯ ಆರೋಪಿಗಳನ್ನು ಐದು ದಿನಗಳ ಕಾಲ ವಶಕ್ಕೆ ನೀಡಿದೆ.
ಹಲ್ಲೆಗೊಳಗಾಗಿದ್ದ ತೌಶಿತ್ ಇನ್ನು ಪತ್ತೆಯಾಗಿಲ್ಲ, ತೌಶಿತ್‌ನನ್ನುಹುಡುಕಲಾಗುತ್ತಿದೆ. ಕಿಟ್ಟಿ ಸ್ನೇಹಿತ ಸುನೀಲ್ ಪತ್ನಿಯೊಂದಿಗೆ ತೌಸಿತ್ ಸಲುಗೆಯಿಂದ ಇದ್ದರು. ಈ ವಿಚಾರವನ್ನು ಸುನೀಲ್, ಕಿಟ್ಟಿ ಬಳಿ ಹೇಳಿಕೊಂಡಿದ್ದ. ಫೆ.28 ರಂದು ಆರೋಪಿಗಳು ಮರಿಯಪ್ಪನ ಪಾಳ್ಯದಲ್ಲಿರುವ ರೆಸ್ಟೋರೆಂಟ್ ಸಪ್ಲೈಯರ್ ಗಿರೀಶ್, ತೌಶಿಕ್ ಎಂಬಾತನನ್ನು ಆರೋಪಿಗಳು ಅಪಹರಿಸಿ ಹೊರಮಾವು ಬಳಿ ತೋಟದ ಮನೆಗೆಯಲ್ಲಿ ಅಕ್ರಮ ಬಂಧನದಲ್ಲಿಟ್ಟು, ಹಲ್ಲೆ ನಡೆಸಿದ್ದರು.
ಈ ಸಂಬಂಧ ಗಿರೀಶ್ ಜ್ಞಾನಭಾರತಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಸುನಿಲ್ ಈ ಮೊದಲು ದೂರದ ಸಂಬಂಧಿ ಯುವತಿಯೊಬ್ಬರನ್ನು ವಿವಾಹವಾಗಿದ್ದು, ಆಕೆಯಿಂದ ದೂರವಾಗಿದ್ದಾನೆ. ಈ ಮಧ್ಯೆ ದೀಪಾಳನ್ನು ಪ್ರೀತಿಸಿ ಅಂತರ್ಜಾತಿ ಮದುವೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.