Fact Check: ವಾಣಿಜ್ಯ ನಗರಿ ಮುಂಬೈನಲ್ಲಿ ಮಳೆ ಸುರಿದಾಗ ಬಂದದ್ದು ನೀರಲ್ಲ, ಮೀನು?

By Web DeskFirst Published Jul 15, 2019, 9:32 AM IST
Highlights

ಆಕಾಶದಿಂದ ರಾಶಿ ರಾಶಿ ಮೀನುಗಳು ಉದುರುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ, ಮಹಾರಾಷ್ಟ್ರದ ಮುಂಬೈನಲ್ಲಿ ಮೀನಿನ ಮಳೆ ಸುರಿಯುತ್ತಿದೆ ಎಂದು ಹೇಳಲಾಗುತ್ತಿದೆ.  ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ಆಕಾಶದಿಂದ ರಾಶಿ ರಾಶಿ ಮೀನುಗಳು ಉದುರುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ, ಮಹಾರಾಷ್ಟ್ರದ ಮುಂಬೈನಲ್ಲಿ ಮೀನಿನ ಮಳೆ ಸುರಿಯುತ್ತಿದೆ ಎಂದು ಹೇಳಲಾಗುತ್ತಿದೆ.

ವಿಡಿಯೋದಲ್ಲಿ ಆಕಾಶದಿಂದ ನಿರಂತರವಾಗಿ ಮೀನುಗಳು ಉದುರುತ್ತಿದ್ದು, ಜನರು ಅವುಗಳನ್ನು ಬಾಚಿಕೊಳ್ಳುತ್ತಿರುವ ದೃಶ್ಯವಿದೆ. ಅದರೊಂದಿಗೆ, ‘ಮುಂಬೈನಲ್ಲಿ ಮೀನಿನ ಮಳೆ. ಬಿಬಿಸಿ ಸುದ್ದಿವಾಹಿನಿಯ ಪ್ರಕಾರ ಇಲ್ಲಿ ಮಳೆ, ಮಂಜು ಸುರಿಯುವ ಬದಲು ಮೀನುಗಳು ಆಕಾಶದಿಂದ ಉದುರಿವೆ. ವಿಜ್ಞಾನಿಗಳು ಈ ದೃಶ್ಯ ಕಂಡು ದಿಗ್ಭ್ರಮೆಗೊಂಡಿದ್ದಾರೆ. ಇದು ಮಾನವನ ಜ್ಞಾನದ ಅಂತ್ಯವಾಗಿ ದೇವರ ಶಕ್ತಿ ಮುನ್ನೆಲೆಗೆ ಬರುವ ಸಂಕೇತ’ ಎಂದು ಒಕ್ಕಣೆ ಬರೆಯಲಾಗಿದೆ.

ಆದರೆ ಈ ವಿಡಿಯೋದ ಸತ್ಯಾಸತ್ಯ ಏನೆಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂದು ಪತ್ತೆಯಾಗಿದೆ. ಆಲ್ಟನ್ಯೂಸ್‌ ಸುದ್ದಿಸಂಸ್ಥೆ ‘ಫಿಶ್‌ರೈನ್‌’ ಎಂಬ ಕೀ ವರ್ಡ್‌ ಬಳಸಿ ಹುಡುಕಿದಾಗ ವೈರಲ್‌ ಆಗಿರುವ ಚಿತ್ರಕ್ಕೆ ಸಾಕಷ್ಟುಸಾಮ್ಯತೆ ಇರುವ ವಿಡಿಯೋ ಲಭ್ಯವಾಗಿದೆ.

ಬೇರೆ ಬೇರೆ ವಿಡಿಯೋಗಳನ್ನು ಸಂಕಲಿಸಿ ವಿಡಿಯೋವನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿದುಬಂದಿದೆ. ಆಕಾಶದಿಂದ ಮೀನುಗಳು ಉದುರುತ್ತಿರುವ ದೃಶ್ಯವು ಬಿಬಿಸಿ ಚಾನೆಲ್‌ನಲ್ಲಿ ಪ್ರಸಾರವಾದ ‘ಸೂಪರ್‌ ನ್ಯಾಚುರಲ್‌: ದ ಅನ್‌ ಸೀನ್‌ ಪವ​ರ್‍ಸ್ ಆಫ್‌ ಅನಿಮಲ್‌ ಸೀರೀಸ್‌2008’ನ ವಿಡಿಯೋ. ಇದರ ಜೊತೆಗೆ ಇನ್ನಾವುದೋ ವಿಡಿಯೋ ಸೇರಿಸಿ ಈ ಸುಳ್ಳುಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್ 

click me!