ಏಳು ಮುಸ್ಲಿಂ ರಾಷ್ಟ್ರಗಳ ಪ್ರಜೆಗಳು ಮೇಲಿನ ವೀಸಾ ನಿರ್ಬಂಧ ಆದೇಶ ವಾಪಸ್

Published : Feb 05, 2017, 09:20 AM ISTUpdated : Apr 11, 2018, 12:48 PM IST
ಏಳು ಮುಸ್ಲಿಂ ರಾಷ್ಟ್ರಗಳ ಪ್ರಜೆಗಳು  ಮೇಲಿನ ವೀಸಾ ನಿರ್ಬಂಧ ಆದೇಶ ವಾಪಸ್

ಸಾರಾಂಶ

ಏಳು ಮುಸ್ಲಿಂ ರಾಷ್ಟ್ರಗಳ ಪ್ರಜೆಗಳು  ತನ್ನ ದೇಶ ಪ್ರವೇಶಿಸದಂತೆ ಅಮೆರಿಕ ಕೆಲವು ದಿನಗಳ ಹಿಂದೆ  ಹೊರಡಿಸಿದ್ದ ವಿವಾದಾತ್ಮಕ ಕಾರ್ಯಕಾರಿ ಆದೇಶವನ್ನು ಹಿಂದಕ್ಕೆ ಪಡೆದಿದೆ.

ವಾಷಿಂಗ್ಟನ್(ಫೆ.05): ಏಳು ಮುಸ್ಲಿಂ ರಾಷ್ಟ್ರಗಳ ಪ್ರಜೆಗಳು  ತನ್ನ ದೇಶ ಪ್ರವೇಶಿಸದಂತೆ ಅಮೆರಿಕ ಕೆಲವು ದಿನಗಳ ಹಿಂದೆ  ಹೊರಡಿಸಿದ್ದ ವಿವಾದಾತ್ಮಕ ಕಾರ್ಯಕಾರಿ ಆದೇಶವನ್ನು ಹಿಂದಕ್ಕೆ ಪಡೆದಿದೆ.

 ‘ಅಧ್ಯಕ್ಷ ಟ್ರಂಪ್‌ ಆದೇಶವನ್ನು ಹಿಂಪಡೆದಿದ್ದೇರೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದ್ದಾರೆ. ‘ಯಾವುದೇ ಮುಸ್ಲಿಂ ಪ್ರಜೆಗಳ ವೀಸಾ ಕಾನೂನು ಸಮ್ಮತವಾಗಿದ್ದರೆ ಅವರು ಅಮೆರಿಕದಲ್ಲಿರಬಹುದು’ ಎಂದು ಅವರು ವಿವರಿಸಿದ್ದಾರೆ.  ಮುಸ್ಲಿಂ ರಾಷ್ಟ್ರಗಳ  ಪ್ರಜೆಗಳು ಅಮೆರಿಕ ಪ್ರವೇಶಿಸದಂತೆ ಟ್ರಂಪ್ ಅವರು ಹೊರಡಿಸಿದ್ದ ಕಾರ್ಯಕಾರಿ ಆದೇಶಕ್ಕೆ ವಾಷಿಂಗ್ಟನ್ ಫೆಡರ್‌ ಜಡ್ಜ್ ತಾತ್ಕಾಲಿಕ ತಡೆ ನೀಡಿದ್ದರು. ಇದಾದ ನಂತರ ಆದೇಶವನ್ನು ಅಧಿಕಾರಿಗಳು ಅಮಾನತುಪಡಿಸಿದ್ದಾರೆ. ಇದರೊಂದಿಗೆ ಕಾನೂನು ಹೋರಾಟದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಹಿನ್ನಡೆ ಅನುಭವಿಸಿದ್ದಾರೆ.

 ಈ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಟ್ರಂಪ್, ಜಡ್ಜ್ ನಿರ್ಧಾರವು ಹಾಸ್ಯಾಸ್ಪದವಾಗಿದ್ದು, ಇದರಿಂದ ಕಾನೂನು ಜಾರಿಗೆ ತೊಡಕಾಗಲಿದೆ. ಇದನ್ನು ಅನೂರ್ಜಿತಗೊಳಿಸಲಾಗುವುದು ಎಂದ ದಿಟ್ಟ ಹೇಳಿಕೆಯನ್ನು ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಿತ್ತೂರು ಕರ್ನಾಟಕ ಹೆಸರಲ್ಲಿ ಪ್ರತ್ಯೇಕ ರಾಜ್ಯವಾಗಲಿ: ಶಾಸಕ ರಾಜು ಕಾಗೆ ಆಗ್ರಹ
ಸಿಎಂ ಸಿದ್ದರಾಮಯ್ಯ ಹೇಳಿಕೆಯೇ ನಮಗೆ ಅಂತಿಮ ಮಾರ್ಗದರ್ಶನ: ಸಚಿವ ದಿನೇಶ್ ಗುಂಡೂರಾವ್